ವಾಮಾಚಾರಕ್ಕಾಗಿ ಸಾಕು ನಾಯಿಯನ್ನೇ ಕೊಂದ ಮಹಿಳೆ!

Views: 74
ಕನ್ನಡ ಕರಾವಳಿ ಸುದ್ದಿ: ವಾಮಾಚಾರಕ್ಕಾಗಿ ತಾನು ಸಾಕಿದ ನಾಯಿಯನ್ನೇ ಮಹಿಳೆ ಕತ್ತು ಸೀಳಿ ಕೊಂದು ಮುಚ್ಚಿಟ್ಟಿದ್ದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹದೇವಪುರದ ಚಿನ್ನಪ್ಪ ಲೇಔಟ್ ನಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ತಾವು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್ ನಲ್ಲಿ ಈ ಕೃತ್ಯ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಾಮಾಚಾರಕ್ಕಾಗಿ ನಾಲ್ಕು ದಿನಗಳ ಹಿಂದೆಯೇ ಈ ಮಹಿಳೆ ತಾನೇ ಸಾಕಿದ ನಾಯಿಯನ್ನು ಹತ್ಯೆ ಮಾಡಿ ಬಚ್ಚಿಟ್ಟಿದ್ದಳು ಎನ್ನಲಾಗುತ್ತಿದೆ. ಮಹದೇವಪುರದ ಚಿನ್ನಪ್ಪ ಲೇಔಟ್ ಅಪಾರ್ಟ್‌ಮೆಂಟ್ನಲ್ಲಿ ವಾಸವಾಗಿದ್ದ ಮಹಿಳೆ, ನಾಯಿಯ ಕತ್ತು ಕೊಯ್ದು ಹತ್ಯೆಗೈದಿದ್ದಾರೆ. ಹತ್ಯೆ ನಂತರ ನಾಯಿಯನ್ನು ಬಟ್ಟೆಯಲ್ಲಿ ಸುತ್ತಿಟ್ಟಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಈ ಮಹಿಳೆ 4 ಲ್ಯಾಬೋಡರ್ ನಾಯಿಗಳನ್ನು ಸಾಕಿದ್ದು, ಒಂದು ನಾಯಿಯನ್ನು ಕೊಂದಿದ್ದಾರೆ. ಮೃತ ನಾಯಿಯ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಕಳೇಬರ ಸಿಕ್ಕಿದೆ. ಇದನ್ನು ಮರಣೋತ್ತರ ಪರೀಕ್ಷೆಗೆಂದು ಕಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಹತ್ಯೆ ಮಾಡಿದ್ದು, ಬ್ಲ್ಯಾಕ್ ಮ್ಯಾಜಿಕ್‌ಗಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಮಹದೇವಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.