ರಾಜಕೀಯ

ಲೋಕಸಭಾ ಚುನಾವಣೆ: ಕಾಂಗ್ರೆಸ್ಗೆ ಯಾವ ಕ್ಷೇತ್ರದಲ್ಲಿ ಗೆಲುವು ಸುಲಭ, ಗೆಲುವು ಕಷ್ಟಕರ, 50:50 ಸಾಧ್ಯತೆ ಇರುವ ಕ್ಷೇತ್ರಗಳು.?

Views: 40

ಬೆಂಗಳೂರು,  ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಲೋಕಸಭೆ ಚುನಾವಣೆಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲು ಅನುಭವಿಸುವ ಮೂಲಕ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಇದೀಗ ಲೋಕಸಭಾ ಚುನಾವಣೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪಡೆಯುದಕ್ಕಾಗಿ ಎಚ್ಚರಿಕೆಯ ಹೆಜ್ಜೆ ಇಡಲು ಕೈ ನಾಯಕರು ತಂತ್ರಗಾರಿಕೆಯನ್ನು  ಈಗಲೇ ನಡೆಸಿದ್ದಾರೆ.

ಲೋಕಸಭಾ ಚುನಾವಣೆಗೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್‌ ಮುಂದಿನ ಚುನಾವಣೆಗಾಗಿ ಬಾರಿ ಪುನರಾವರ್ತನೆ ಆಗದಂತೆ ತಂತ್ರಗಾರಿಕೆ ರೂಪಿಸುತ್ತಿದೆ. ಕೇವಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು.

ಇದೀಗ  ಹೈಕಮಾಂಡ್ ಕನಿಷ್ಠ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ನೀಡಿದೆ.ಅದರಲ್ಲಿಯೂ ಲೋಕಸಭಾ ಚುನಾವಣೆ ಗೆ ನಿಲ್ಲಲು ಹೆಚ್ಚಿನ ನಾಯಕರು ಹಿಂದೇಟು ಹಾಕುವಂತೆ ಕಂಡು ಬಂದಿದೆ. ಗೆಲ್ಲುವ ನಿಟ್ಟಿನಲ್ಲಿ ಕೈ ನಾಯಕರು ಹಲವು ತಂತ್ರಗಾರಿಕೆಯನ್ನು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯಾವ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದೆ, ಯಾವ ಕ್ಷೇತ್ರದಲ್ಲಿ ಗೆಲುವು ಕಠಿಣವಾಗಲಿದೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿ ತಲೆ ಕೆಡಿಸಿಕೊಂಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಸುವ ಕುರಿತು ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್‌, ಗೆಲ್ಲಲು ಸಾಧ್ಯವಿದ್ದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳಿಗೆ ಜಾಸ್ತಿ ಒತ್ತು ಕೊಡಲು ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಹಾಗಾದರೆ ಅವುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಕಾಂಗ್ರೆಸ್‌ ಗ್ಯಾರಂಟಿ ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳು ಇಲ್ಲಿವೆ?

ಬೆಂಗಳೂರು ಗ್ರಾಮಾಂತರ,ಮಂಡ್ಯ,ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ,ತುಮಕೂರು, ಚಾಮರಾಜನಗರ, ಬಳ್ಳಾರಿ,ಚಿತ್ರದುರ್ಗ,ವಿಜಯಪುರ, ರಾಯಚೂರು,ಬೆಳಗಾವಿ,ಕಲಬುರಗಿ

ಕಾಂಗ್ರೆಸ್‌ ಗೆ ಯಾವ ಕ್ಷೇತ್ರದಲ್ಲಿ ಗೆಲುವು ಕಷ್ಟಕರವಾಗಲಿದೆ ?

ಉತ್ತರ ಕನ್ನಡ,ದಕ್ಷಿಣ ಕನ್ನಡ,ಉಡುಪಿ -ಚಿಕ್ಕಮಗಳೂರು,ಧಾರವಾಡ,ಹಾಸನ,ಬೆಂಗಳೂರು ದಕ್ಷಿಣ,ಶಿವಮೊಗ್ಗ,ಬೀದರ್,ಚಿಕ್ಕೋಡಿ

50-50 ಸಾಧ್ಯತೆ ಇರುವ ಲೋಕಸಭಾ ಕ್ಷೇತ್ರಗಳು ?

ಕೊಪ್ಪಳ, ಬೆಂಗಳೂರು ಉತ್ತರ,ಬೆಂಗಳೂರು ಸೆಂಟ್ರಲ್,ದಾವಣಗೆರೆ,ಬಾಗಲಕೋಟೆ

Related Articles

Back to top button