ರಾಜಕೀಯ
ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷೆ ಕಲಾವತಿ ಪತಿ ಇಂಜಿನಿಯರ್ ರವಿಶಂಕರ್ ನಿಧನ
Views: 121
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಿಠಲವಾಡಿಯ ಮೈನಾಡಿ ರಸ್ತೆಯ ನಿವಾಸಿ ಇಂಜಿನಿಯರ್ ರವಿಶಂಕರ್ (62) ಅಲ್ಪಕಾಲದ ಅಸ್ವಸ್ಥತೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಪುರಸಭೆ ಕಾಮಗಾರಿ ಗುತ್ತಿಗೆದಾರರಾಗಿದ್ದ ಇವರು ಪರಿಸರದ ಅನೇಕ ಬಡ ಜನರಿಗೆ ಮನೆ ಕಟ್ಟಲು ತಾಂತ್ರಿಕ ಪರಿಣತಿಯ ಸೇವೆ ನೀಡಿ ಪುರಭೆಯ ಅನುಮೋದನೆ ಒದಗಿಸಿ ಕೊಡುತ್ತಿದ್ದರು. ಪತ್ನಿ ಪುರಸಭೆಯ ಮಾಜಿ ಅಧ್ಯಕ್ಷೆ ಯು.ಕಲಾವತಿ ,ಇಬ್ಬರೂ ಪುತ್ರಿಯರು ಹಾಗೂ ಅನೇಕ ಬಂಧು ಬಳಗದವರನ್ನು ಅಗಲಿದ್ದಾರೆ.






