ಸಿದ್ದರಾಮಯ್ಯ ಇನ್ನು 15 ದಿನದಲ್ಲಿ ಸಿಎಂ ಸ್ಥಾನದಿಂದ ಔಟ್: ಸೋಮಣ್ಣ
Views: 36
ಕನ್ನಡ ಕರಾವಳಿ ಸುದ್ದಿ:ಸ್ವಾರ್ಥಕ್ಕೋಸ್ಕರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಇನ್ನು 15 ದಿನಗಳಲ್ಲಿ ಸಿಎಂ ತಮ್ಮ ಖುರ್ಚಿಯಿಂದ ಕೆಳಗೆ ಇಳಿಯಲಿದ್ದಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ರಾಜ್ಯದ ಜನರಿಗೆ ವಂಚನೆ ಮಾಡುವ ಕೆಲಸ ಮಾಡಿ, ಈ ರಾಜ್ಯವನ್ನು ಕತ್ತಲೆ ಕೋಣೆಯಲ್ಲಿಡುವ ಕೆಲಸ ಮಾಡಿದ್ದಾರೆ. ನಾವು ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಪಾಲುದಾರಿಕೆಯನ್ನು ಕೊಟ್ಟಿದ್ದೇವೆ. ಸರಕಾರದಲ್ಲಿ ಹಣವೇ ಇಲ್ಲ. ಹೀಗಾಗಿ ಯಾವುದೇ ಶಾಸಕರೂ ತನ್ನ ಕಾರ್ಯಕ್ಷೇತ್ರಕ್ಕೆ ಹೋಗಿ ನಾನು ಒಳ್ಳೆಯ ಕೆಲಸ ಮಾಡಿದ್ದೇನೆ ನನ್ನಿಂದ ಇಷ್ಟು ಕೆಲಸ ಆಗಿದೆ ಎಂದು ಹೇಳುವ ನೈತಿಕತೆಯನ್ನು ಕೇವಲ ವಿಪಕ್ಷದವರಷ್ಟೇ ಅಲ್ಲ ಆಡಳಿತ ಪಕ್ಷದವರೂ ಕಳಕೊಂಡಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಿತಿಮೀರಿದೆ ಎಂದರು.
ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಮತ್ತು ಸಿದ್ದರಾಮಯ್ಯ ‘ಡಮ್ಮಿ ಸಿಎಂ’ ಆಗಿದ್ದಾರೆ ಎಂದು ಟೀಕಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಯಾರಿಗೂ ಉಸಿರಾಡಲು ಬಿಡುತ್ತಿಲ್ಲ ಮತ್ತು ಅವರ ಅನುಭವ ಮಣ್ಣು ಪಾಲಾಗುತ್ತಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ.
ಸೋಮಣ್ಣ ಕಾಂಗ್ರೆಸ್ ಹೈಕಮಾಂಡ್ ಅಲ್ಲ
ಇದು ಸೋಮಣ್ಣ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಕಾಂಗ್ರೆಸ್ ನಾಯಕರಿಂದ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಬಹುದು.ಸೋಮಣ್ಣ ಬಿಜೆಪಿಯಲ್ಲಿ ಕೆಲಸ ಇಲ್ಲದಿರುವ ಮಂತ್ರಿ. ಅವರಿಗೆ ಯಾವುದೇ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆ ʼಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆಂದು ತಿಳಿದು ಮುಖ್ಯಮಂತ್ರಿಗಳನ್ನು ಐದು ದಿನ ಪ್ರಚಾರಕ್ಕೆ ಇಳಿಸಿದ್ದಾರೆ ಹಾಗೂ ಕೆಲವೇ ದಿನ ಮಾತ್ರ ಸಿಎಂ ಅಧಿಕಾರದಲ್ಲಿರುತ್ತಾರೆʼ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, “ಸೋಮಣ್ಣ ಅವರಿಗೆ ಪ್ರಚಾರ ಮಾಡಲು ಸಮಯವಿಲ್ಲ. ಕ್ಷೇತ್ರದಲ್ಲಿ ಸೋಲುತ್ತೇವೆಂದು ತಿಳಿದಿರುವುದರಿಂದ ಹೆಚ್ಚು ಪ್ರಚಾರ ಮಾಡುತ್ತಿಲ್ಲ ಅವರು. ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಮಾತನಾಡಲು ಅವರೇನು ಕಾಂಗ್ರೆಸ್ ಹೈಕಮಾಂಡ್ ಅಲ್ಲ” ಎಂದರು.






