ರಾಜಕೀಯ

ಸಂಪುಟ ಪುನಾರಚನೆ ಮುನ್ನೆಲೆಗೆ: ದೆಹಲಿಗೆ ಪ್ರಯಾಣ ಬೆಳೆಸಿದ ಕೈ ಶಾಸಕರು!

Views: 14

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿದೆ. ಹಿರಿಯ ಸದಸ್ಯರಿಗೆ ಆದ್ಯತೆ ನೀಡಲು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿರುವ ಹಿರಿಯ ಶಾಸಕರು ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದ್ದು ಬಾಕಿ ಎರಡು ವರ್ಷಗಳ ಅವಧಿಗೆ ತಮಗೆ ಮಂತ್ರಿ ಸ್ಥಾನ ನೀಡುವಂತೆ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ. ಭಾನುವಾರ ಸಂಜೆ 4.30ಕ್ಕೆ ಹಲವು ಎಂಎಲ್ಎಗಳು ವಿಮಾನದ ಮೂಲದ ದೆಹಲಿ ಪರೇಡ್ ನಡೆಸಿದ್ದಾರೆ.

ದೆಹಲಿಗೆ ಹೋದ ಶಾಸಕರು:

ಅಶೋಕ್ ಪಟ್ಟಣ್ (ರಾಮದುರ್ಗ)

ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ)

ಸಿ.ಪುಟ್ಟರಂಗಾಶೆಟ್ಟಿ (ಚಾಮರಾಜನಗರ)

ಹಂಪನ ಗೌಡ ಬಾದರ್ಲಿ (ಸಿಂಧನೂರು)

ಡಿ.ಜಿ.ಶಾಂತನಗೌಡ (ಹೊನ್ನಾಳಿ)

ಜೆ.ಟಿ.ಪಾಟೀಲ್ (ಬೀಳಗಿ)

ಬಸವರಾಜ್ ಶಿವಣ್ಣನವರ್ (ಬ್ಯಾಡಗಿ)

ಎ.ಆರ್.ಕೃಷ್ಣಮೂರ್ತಿ (ಕೊಳ್ಳೇಗಾಲ)

ಪ್ರಸಾದ್ ಅಬ್ಬಯ್ಯ (ಹು-ಧಾ ಪೂರ್ವ)

ಯು.ಬಿ.ಬಣಕಾರ್ (ಹಿರೇಕೆರೂರು)

ಜಿ.ಎಸ್.ಪಾಟೀಲ್ (ರೋಣ)

ಯಶವಂತರಾಯ ಗೌಡ ಪಾಟೀಲ್ (ಇಂಡಿ)

ಕೆ.ಷಡಕ್ಷರಿ (ತಿಪಟೂರು)

ಟಿ.ಬಿ.ಜಯಚಂದ್ರ (ಶಿರಾ)

ಎಸ್.ಎನ್.ನಾರಾಯಣ್ ಸ್ವಾಮಿ (ಬಂಗಾರಪೇಟೆ)

ಲಕ್ಷ್ಮಣ ಸವದಿ (ಅಥಣಿ)

ಅಪ್ಪಾಜಿನಾಡಗೌಡ (ಮುದ್ದೇಬಿಹಾಳ)

ರಿಜ್ವಾನ್ ಅರ್ಷದ್ (ಶಿವಾಜಿನಗರ)

ಪ್ರಿಯಾಕೃಷ್ಣ (ಗೋವಿಂದರಾಜನಗರ)

ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ)

ವಿ.ಶಿವಣ್ಣ (ಆನೇಕಲ್)

ವಿನಯ್ ಕುಲಕರ್ಣಿ (ಧಾರವಾಡ)

ರಾಘವೇಂದ್ರ ಹಿಟ್ನಾಳ್ (ಕೊಪ್ಪಳ)

 

Related Articles

Back to top button
error: Content is protected !!