ಯುವಜನ

ಲಂಡನ್ ಯುವತಿ ಕೈಹಿಡಿದ ಗಂಗಾವತಿ ಹುಡುಗ 

Views: 375

ಕನ್ನಡ ಕರಾವಳಿ ಸುದ್ದಿ: ಒಂದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ದೂರದ ಲಂಡನ್  ಹುಡುಗಿಯನ್ನು ಗಂಗಾವತಿಯ ಹುಡುಗನೊಬ್ಬ ವರಿಸಿದದ್ದಾನೆ.

ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯ ನಿವಾಸಿ ಮುರಳಿ ಎಂಬ ಯುವಕ, ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ, ಗೆಸ್ಟ್ಹೌಸ್ ಮಾಲಿಕ. ಇದೀಗ ಈತ ಸಿನಿಮಾ ರಂಗ ಕಲೆಯಲ್ಲಿ ಕಥೆ ಬರೆಯುವ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಎಂಬ ಲಂಡನ್ ಯುವತಿಯ ಕೈ ಹಿಡಿದಿದ್ದಾರೆ.

ಶುಕ್ರವಾರ ಗಂಗಾವತಿಯ ವಿವಾಹ ನೋಂದಣಿ ಕಚೇರಿಯಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಬಿಳಿ ಸೀರೆಯಲ್ಲಿ ಥೇಟ್ ಭಾರತೀಯ ನಾರಿಯಂತೆ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಕಂಗೊಳಿಸುತ್ತಿದ್ದರು.

ಇತ್ತ ಮುರಳಿ, ತಮ್ಮ ಆಪ್ತರೊಂದಿಗೆ ಸಾದಾ ಸೀದಾ ವಸ್ತ್ರದಲ್ಲಿ ರಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ವಿವಾಹ ನೋಂದಣಿ ಮಾಡಿಸಿಕೊಂಡರು. ಬಳಿಕ ಅಲ್ಲಿದ್ದ ಜನರಿಗೆ ಧಾರವಾಡದ ಪೇಡಾ ಹಂಚಿ ಸಂತಸ ಹಂಚಿಕೊಂಡರು.

ಮುರಳಿ ವೃತ್ತಿಯಲ್ಲಿ ಪ್ರವಾಸಿ ಮಾರ್ಗದರ್ಶಕ, ಗೆಸ್ಟ್ ಹೌಸ್ ಮಾಲಿಕ. ಪ್ರವೃತ್ತಿಯಲ್ಲಿ ಸಿನಿಮಾ ನಿರ್ಮಾಣ, ನಿರ್ದೇಶನದ ಕನಸು ಹೊತ್ತವರು. ಅತ್ತ ಚಾರ್ಲೊಟ್ಟೆ ಮೇರಿ ಫಿಂಕ್ಲರ್ ಕೂಡ ಸಿನಿಮಾಗಳಿಗೆ ಕತೆ ಬರೆಯುವ ಹವ್ಯಾಸ ಉಳ್ಳವರು. ಕಳೆದ ಎರಡು ವರ್ಷದ ಹಿಂದೆ ಈಕೆ ಭಾರತದ ಕರ್ನಾಟಕಕ್ಕೆ ಬಂದಿದ್ದು, ಮುರುಳಿ ನಿರ್ಮಾಣ ಮಾಡುತ್ತಿದ್ದ `ಐ ಲವ್ ಮೈ ಕಂಟ್ರಿ’ ಎಂಬ ಕಿರುಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಈ ಜೋಡಿಯ ಮಧ್ಯೆ ಪರಿಚಯವಾಗಿದೆ. ಆ ಪರಿಚಯ ಸ್ನೇಹಕ್ಕೆ ತಿರುಗಿದೆ.

ಸದ್ಯಕ್ಕೆ ಈ ಜೋಡಿ ಗಂಗಾವತಿಯಲ್ಲಿ ಮದುವೆಯಾಗಿದ್ದು, ಮೇ 9ರಂದು ಲಂಡನ್ನಲ್ಲಿ ಅಲ್ಲಿನ ಸಂಪ್ರದಾಯದಂತೆ ಆರತಕ್ಷತೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

.

Related Articles

Back to top button