ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಒ ಲೋಕಾಯುಕ್ತ ಬಲೆಗೆ

Views: 80
ಕನ್ನಡ ಕರಾವಳಿ ಸುದ್ದಿ: ಗೋದಾಮು ನಿರ್ಮಾಣ ಕಾಮಗಾರಿ ಬಿಲ್ ಪೂರೈಸಿದ್ದಕ್ಕೆ 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, 50 ಸಾವಿರ ರೂ.ಗಳಿಗೆ ಒಪ್ಪಿಕೊಂಡು ಲಂಚದ ಹಣ ಪಡೆಯುತ್ತಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಜಿಲ್ಲೆಯ ಸವಣೂರು ತಾಲೂಕು ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಶೋಕ ದ್ಯಾಮಪ್ಪ ಗೊಂದಿ ಬಂಧಿತ ಆರೋಪಿ. ಫಿರ್ಯಾದುದಾರ ಸವಣೂರು ತಾಲೂಕು ತೆಗ್ಗಿಹಳ್ಳಿಯ ದಾವಲಮಲಿಕ್ ಇಮಾಮಸಾಬ್ ಮುರಡಿ ಎಂಬುವವರು ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕ್ಕೀರನಂದಿಹಳ್ಳಿ ಗ್ರಾಮದಲ್ಲಿ ಗೋದಾಮು ನಿರ್ಮಾಣ ಕಾಮಗಾರಿಯನ್ನು ಪೂರೈಸಿ ಕಾಮಗಾರಿ ಮೊತ್ತ 1.60 ಲಕ್ಷ ರೂ.ಗಳನ್ನು ಮಂಜೂರು ಮಾಡಿಸಲು ಕೇಳಿದ್ದರು.
ಆರೋಪಿತ ಅಧಿಕಾರಿ ಅಶೋಕ ಗೊಂದಿ ಕಾಮಗಾರಿಯ ಒಟ್ಟು ಮೊತ್ತದಲ್ಲಿ ಅರ್ಧ ಅಂದರೆ 80 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ನಂತರ 50 ಸಾವಿರ ರೂ.ಗಳಿಗೆ ಒಪ್ಪಿಕೊಂಡು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೇಲ್‌ನಲ್ಲಿ 50 ಸಾವಿರ ರೂ. ಲಂಚದ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ