ಜನಮನ

ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಪದಪ್ರಧಾನ

Views: 0

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ನ ಪದಪ್ರಧಾನ ಸಮಾರಂಭ ಬಂಟರ ಯಾನೆ ನಾಡವರ ಸಂಘದ ಆರ್.ಎನ್.ಶೆಟ್ಟಿ ಹಾಲ್ ನಲ್ಲಿ ನಡೆಯಿತು.

ಪದಪ್ರದಾನ ಅಧಿಕಾರಿಯಾಗಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಡಾ. ಸಂದೀಪ್ ಶೆಟ್ಟಿ ಅವರು ಭಾಗವಹಿಸಿ ಪದಪ್ರಧಾನವನ್ನು ನೆರವೇರಿಸಿದರು.

ಕೆ.ಪಿ.ಸಿ. ಲಿಮಿಟೆಡ್ ನ ನಿವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ವಿಶ್ವನಾಥ ಶೆಟ್ಟಿ, ರೋಟರಿ ವಲಯ ಸೇನಾನಿ ಕೆ. ರಂಜಿತ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

2022-23 ನೇ ಸಾಲಿನ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಎಚ್. ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಸಂಪತ್ ಕುಮಾರ್ ಶೆಟ್ಟಿ, ಕಾವ್ರಾಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 2022-23 ನೇ ಸಾಲಿನ ಕಾರ್ಯದರ್ಶಿ ಎಸ್. ಶ್ರೀಕಾಂತ್ ಶೆಟ್ಟಿ, ಪ್ರಸಕ್ತ ಸಾಲಿನ ಕಾರ್ಯದರ್ಶಿ ಸಚಿನ್ ಕುಮಾರ್ ಶೆಟ್ಟಿ, ಹುಂಚನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಳಿನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button