ಆರೋಗ್ಯ

ಯುವತಿಗೆ ದಪ್ಪ ಆಗುವ ಭಯ.. ಆನ್‌ಲೈನ್ ಡಯಟ್‌ ಫಾಲೋ ಮಾಡಿ ದಾರುಣ ಸಾವು

Views: 135

ಕನ್ನಡ ಕರಾವಳಿ ಸುದ್ದಿ: 18 ವರ್ಷದ ಈ ಶ್ರೀನಂದ ಕನ್ನೂರು ಜಿಲ್ಲೆಯ ಕೂತುಪರಂಬದ ನಿವಾಸಿ. ಈಕೆಗೆ ತಾನು ದಪ್ಪ ಆಗುವ ಭಯ ಕಾಡುತ್ತಾ ಇತ್ತು. ಯಾವುದೇ ಕಾರಣಕ್ಕೂ ದಪ್ಪ ಆಗಬಾರದು ಅಂತ ನಿರ್ಧರಿಸಿದ್ದ ಶ್ರೀನಂದ ಆನ್‌ಲೈನ್‌ನಲ್ಲಿ ಸಿಗುವ ಡಯಟ್‌ಗಳನ್ನು ಫಾಲೋ ಮಾಡಿದ್ದಾರೆ.

ಶ್ರೀನಂದ ಸಂಬಂಧಿಕರು ಹೇಳುವ ಪ್ರಕಾರ ಈಕೆ ಹಲವು ದಿನಗಳ ಕಾಲ ಊಟವನ್ನೇ ಮಾಡುತ್ತಿರಲಿಲ್ಲ. ಬರೀ ಬಿಸಿ ನೀರು ಕುಡಿದೇ ಜೀವಿಸುತ್ತಿದ್ದಳು. ದಪ್ಪ ಆಗುವ ಭಯದಲ್ಲಿ ಆನ್‌ಲೈನ್‌ನಲ್ಲಿ ಹೇಳಲಾಗುವ ಈ ವಾಟರ್‌ ಡಯಟ್‌ ಅನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಿದ್ದಳು.

ಅತಿಯಾದ ಹಸಿವನ್ನು ನಿಯಂತ್ರಿಸುತ್ತಿದ್ದ ಶ್ರೀನಂದ ಕೊನೆಗೆ ತಲಶ್ಶೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ವೆಂಟಿಲೇಟರ್‌ನಲ್ಲಿ ಉಸಿರಾಡುತ್ತಿದ್ದ ಶ್ರೀನಂದ ಪ್ರಾಣ ಬಿಟ್ಟಿದ್ದಾರೆ. ಶ್ರೀನಂದ ಮೊದಲ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದು ಹಸಿವು ನಿಯಂತ್ರಿಸಿ ಕೇವಲ 24 ಕೆ.ಜಿಗೆ ಕುಸಿದಿದ್ದರು.

ಕೇರಳದ ಯುವತಿ ಶ್ರೀನಂದ ದುರಂತದ ಬಗ್ಗೆ ವೈದ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಕಳೆದ 5-6 ತಿಂಗಳಿಂದ ಶ್ರೀನಂದ ಅತಿಯಾದ ಹಸಿವನ್ನು ನಿಯಂತ್ರಿಸಿದ್ದು ಸಾವಿಗೆ ಕಾರಣವಾಗಿದೆ. ಯಾರು ಕೂಡ ಇಂತಹ ದುಸ್ಸಾಹಸ ಮಾಡಬೇಡಿ ಅನ್ನೋ ಎಚ್ಚರಿಕೆ ನೀಡಿದ್ದಾರೆ.

Related Articles

Back to top button