ಜನಮನ
ಮದ್ಯ ಸೇವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ ವ್ಯಕ್ತಿ..ಕುಡುಕನ ಅವಾಂತರದಿಂದ ವಾಹನ ಸವಾರರಿಗೆ ಸಂಕಟ!

Views: 58
ಚಿಕ್ಕಮಗಳೂರು: ವ್ಯಕ್ತಿಯೋರ್ವ ರಾತ್ರಿ ಮದ್ಯದ ಅಮಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರದ ಹಳಸೆ ಗ್ರಾಮದ ಸಮೀಪ ನಡೆದಿದೆ. ಹಾರ್ನ್ ಮಾಡಿದರೂ ಮೇಲಕ್ಕೆ ಎದ್ದೇಳದೆ ವ್ಯಕ್ತಿ ಕೀಟಲೆ ನೀಡಿದ್ದಾನೆ. ಕುಡುಕನ ಅವಾಂತರದಿಂದ ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಿಸಿದ್ದಾನೆ.
ನಶೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮಲಗಿದ ವ್ಯಕ್ತಿಯನ್ನು ಕಂಡು ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಕುಡುಕ ಕೆಲ ಹೊತ್ತಿನ ನಂತರ ಎದ್ದು ಅಲ್ಲೇ ಸುತ್ತಾಡಿ ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ.