ಇತರೆ
ಮಣಿಪಾಲದಲ್ಲಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ :ತಂದೆ ಮಗಳು ಗಂಭೀರ ಗಾಯ

Views: 0
ಉಡುಪಿ: ಇಲ್ಲಿನ ಟೈಗರ್ ಸರ್ಕಲ್ ಬಳಿ ಇಂದು ಸಂಜೆ ವೇಳೆ ಬಸ್ ಮತ್ತು ಸ್ಕೂಟಿ ಮದ್ಯೆ ಸಂಭವಿಸಿದ ಅಪಘಾತದಲ್ಲಿ ತಂದೆ ಮಗಳು ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡವರು ಅಂಜಾರು ಗ್ರಾಮದ ಕಾಜರು ಗುತ್ತು ನಿವಾಸಿ ರಮೇಶ್ ಜಿ ಪ್ರಭು( 69 )ಹಾಗೂ ಅವರ ಮಗಳು ಮಾಹೆ ಉದ್ಯೋಗಿ ಶ್ರೀದೇವಿ ಪ್ರಭು( 42 )ಎಂದು ಗುರುತಿಸಲಾಗಿದೆ.
ಟೈಗರ್ ಸರ್ಕಲ್ ಬಳಿ ಬರುತ್ತಿದ್ದ ಸ್ಕೂಟರ್ ಗೆ ಉಡುಪಿಯಿಂದ ಮಣಿಪಾಲ ಕಡೆ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ.
ತಂದೆ ಮಗಳು ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ