ಆರೋಗ್ಯ

ಮಗನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಹೋದ ಅಪ್ಪನಿಗೂ ಆಪರೇಷನ್!

Views: 182

ಕನ್ನಡ ಕರಾವಳಿ ಸುದ್ದಿ: ಪಾರ್ಶ್ವವಾಯು ಪೀಡಿತರಾಗಿದ್ದ ಜಗದೀಶ್ ಆ್ಯಕ್ಸಿಡೆಂಟ್ನಿಂದ ಗಾಯಗೊಂಡಿದ್ದ ಮಗ ಮನೀಷ್ನೊಂದಿಗೆ ಆಸ್ಪತ್ರೆಗೆ ಹೋಗಿದ್ದರು ಮಗನೊಂದಿಗೆ ಹೋದ ಅಪ್ಪನಿಗೂ ಆಪರೇಷನ್ ಮಾಡಿ ವೈದ್ಯರ ಮಹಾ ಯಡವಟ್ಟಾದ ಘಟನೆ ರಾಜಸ್ಥಾನದ ಕೋಟಾ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಅಪ್ಪನೊಂದಿಗೆ ಮಗನಿಗೂ ಶಸ್ತ್ರ ಚಿಕಿತ್ಸೆ ಮಾಡಿ ಆಸ್ಪತ್ರೆ ಬೆಡ್ ಮೇಲೆ ಇಬ್ಬರನ್ನೂ ಮಲಗಿಸಿದ್ದಾರೆ ವೈದ್ಯರು. ಈ ಮಹಾ ಪ್ರಮಾದದ ಬಗ್ಗೆ ಇದೀಗ ಜಾಲತಾಣದಲ್ಲಿ ಬಹುದೊಡ್ಡ ಚರ್ಚೆಯೇ ನಡೀತಿದೆ.

ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಮನೀಷ್ ಜೊತೆಯಲ್ಲಿ ಯಾರೂ ಇಲ್ಲದ ಕಾರಣ ಅಪ್ಪನೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಶನಿವಾರ ನಿಮಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಅಂತ ವೈದ್ಯರು ಹೇಳಿದ್ರು. ಇದೇ ಕಾರಣಕ್ಕೇ ಅಪ್ಪ ನೀವು ಆಪರೇಷನ್ ಥಿಯೇಟರ್ ಹೊರಗೆ ಕಾಯುತ್ತಾ ಇರಿ ಅಂತ ಹೇಳಿದ್ದರು. ಆದರೇ, ನನ್ನ ಆಪರೇಷನ್ ಮುಗಿದ ಮೇಲೆ ನೋಡಿದರೇ, ನನ್ನ ಅಪ್ಪನಿಗೂ 5 ರಿಂದ 6 ಸ್ಟಿಚ್ ಹಾಕಿರುವುದು ಗೊತ್ತಾಗಿದೆ ಎನ್ನುತ್ತಿದ್ದಾರೆ ಮನೀಷ್.

ಈ ಪ್ರಮಾದದ ಬಗ್ಗೆ ಕೂಡಲೇ ಸಮಿತಿ ರಚಿಸಿ ತನಿಖೆ ಮಾಡುತ್ತೇವೆ ಅಂತ ಕೋಟಾ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾಕ್ಟರ್ ಸಂಗೀತ ಸಕ್ಸೆನಾ ಹೇಳಿಕೆ ನೀಡಿದ್ದಾರೆ. ಮೂವರು ಸದಸ್ಯರ ಸಮಿತಿ ರಚಿಸಿದ್ದು, ಆದಷ್ಟು ಬೇಗ ತನಿಖೆಯ ವರದಿ ತರಿಸಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

Related Articles

Back to top button