ಕರಾವಳಿ
ಮಂಗಳೂರು: ಕೊರಗಜ್ಜನ ಆದಿಸ್ಥಳಕ್ಕೆ ಬೇಟಿ ನೀಡಿದ ನಟ ಶಿವರಾಜ್ ಕುಮಾರ್ ದಂಪತಿ

Views: 110
ಮಂಗಳೂರು: ಇಲ್ಲಿಗೆ ಸಮೀಪ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಬೇಟಿ ನೀಡಿದ್ದಾರೆ.
ಅಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಮಾತನಾಡಿದ ಅವರು, ಕುತ್ತಾರು ಅಜ್ಜನ ಕಟ್ಟೆಗೆ ಬಂದಾಗ ನೆಮ್ಮದಿ ಸಿಗುತ್ತದೆ. ನಂಬಿಕೆಯೂ ಇರುವುದರಿಂದ ಮಂಗಳೂರು ವ್ಯಾಪ್ತಿಗೆ ಬರುವಾಗ ಈ ಭಾಗಕ್ಕೆ ಭೇಟಿ ನೀಡುತ್ತಿರುತ್ತೇನೆ. ಶೃಂಗೇರಿ ಮಠ, ಶ್ರೀ ಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥೇಶ್ವರ, ವನದೇವತೆ, ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡುತ್ತಾ ಬಂದಿದ್ದೇನೆ. ಎಲ್ಲಾ ಸಾನಿಧ್ಯಕ್ಕೆ ಭೇಟಿಕೊಟ್ಟಾಗ ನೆಮ್ಮದಿಯಿರುತ್ತದೆ. ನಂಬಿಕೆಯೂ ಬಲವಾಗಿರುವುದರಿಂದ ಜೀವನ ಚೆನ್ನಾಗಿರಲಿ ಅನ್ನುವ ಭರವಸೆಯ ಜೊತೆಗೆ ಭೇಟಿ ನೀಡುತ್ತಿರುತ್ತೇನೆ ಎಂದರು.
ಗೀತಾ ಶಿವರಾಜ್ ಕುಮಾರ್ , ಸಿನಿಮಾ ನಿರ್ಮಾಪಕ ಶ್ರೀಕಾಂತ್, ರಾಜೇಶ್ ಭಟ್, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ಮೊದಲಾದವರು ಉಪಸ್ಥಿತರಿದ್ದರು.