ಕರಾವಳಿ
ಬೋಟ್ ನಲ್ಲಿ ಕುಸಿದು ಬಿದ್ದು ಗೋಪಾಡಿಯ ಮೀನುಗಾರ ಸಾವು

Views: 99
ಕನ್ನಡ ಕರಾವಳಿ ಸುದ್ದಿ: ಮೀನುಗಾರಿಕಾ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಲೆಂದು ಬಲೆ ಸರಿ ಮಾಡುತ್ತಿದ್ದಾಗ ಗೋಪಾಡಿಯ ಮೀನುಗಾರರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬ್ರಹ್ಮಾವರ ಹಂಗಾರಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ಗೋಪಾಡಿ ಗ್ರಾಮದ ಗೋವಿಂದ ಎಂದು ತಿಳಿದುಬಂದಿದೆ. ಚಾಮುಂಡೇಶ್ವರಿ ಬೋಟ್ ನಲ್ಲಿ ಗೋವಿಂದ ಅವರು ಕೆಲಸ ಮಾಡುತ್ತಿದ್ದು, 15 ದಿನಗಳಿಗೊಮ್ಮೆ ರಜೆಯಲ್ಲಿ ಮನೆಗೆ ಬರುತ್ತಿದ್ದರು. ಮಂಗಳವಾರ ಮೀನು ಹಿಡಿಯಲು ತೆರಳಲು ಬಲೆ ಸರಿ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ.ಕೂಡಲೆ ಸಹ ಕೆಲಸಗಾರರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.