ಇತರೆ
ಬೇಳೂರು: ಗಾಂಜಾ ಸೇವನೆ ಇಬ್ಬರು ಪೊಲೀಸ್ ವಶಕ್ಕೆ

Views: 129
ಕನ್ನಡ ಕರಾವಳಿ ಸುದ್ದಿ: ಗಾಂಜಾ ಸೇವನೆ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಗಿಳಿಯಾರು ಗ್ರಾಮದ ರಾಘವೇಂದ್ರ(27) ಹಾಗೂ ಬೇಳೂರು ಗ್ರಾಮದ ಶಿವರಾಜ್ (32) ಎಂದು ಗುರುತಿಸಲಾಗಿದೆ.
ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಎ.4ರಂದು ರಾತ್ರಿ ವೇಳೆ ಗಿಳಿಯಾರು ಗ್ರಾಮದ ರಾಘವೇಂದ್ರ ಹಾಗೂ ಬೇಳೂರು ಗ್ರಾಮದ ಶಿವರಾಜ್ ಎಂಬವರನ್ನು ಕೋಟ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.