ಕರಾವಳಿ

ಬೆಳ್ತಂಗಡಿ: ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಹೇರ್‌ ಡ್ರೆಸ್ಸಸ್‌ ಮಾಲಕ ಹೃದಯಾಘಾತದಿಂದ ನಿಧನ

Views: 40

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಅವರು ಕ್ಷೌರಿಕ ವೃತ್ತಿಯಲ್ಲಿರುವಾಗಲೇ ಎದೆನೋವು ಆರಂಭವಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಾ. 24ರಂದು ಸಂಭವಿಸಿದೆ.ಮೃತರು ತಂದೆ, ತಾಯಿ, ಸಹೋದರ, ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.

ಉಜಿರೆಯ ಪ್ರಸಿದ್ಧ ರಾಜ್‌ ಹೇರ್‌ ಡ್ರೆಸ್ಸಸ್‌ ಸಂಸ್ಥೆಯ ಮಾಲಕರಾಗಿರುವ ದೇವರಾಜ ಭಂಡಾರಿ ಮತ್ತು ರತ್ನಾವತಿ ದಂಪತಿಯ ಪುತ್ರನಾಗಿರುವ ಮೃತರು ತಂದೆಯ ಜತೆಗೆ ದೀರ್ಘ‌ ಕಾಲ ಕ್ಷೌರಿಕ ವೃತ್ತಿ ನಡೆಸುತ್ತಿದ್ದರು. ಬಳಿಕ ಕೆಲವು ವರ್ಷಗಳಿಂದ ಆರ್‌.ಕೆ. ಸೆಲೂನ್‌ ಎಂಬ ಸ್ವಂತ ಅಂಗಡಿ ಹೊಂದಿ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆ.

ಅವರು ಉಜಿರೆ ಸುರ್ಯ ರಸ್ತೆಯಲ್ಲಿ ನೂತನ ಮನೆ ನಿರ್ಮಿಸಿದ್ದು, ತಿಂಗಳ ಹಿಂದಷ್ಟೇ ಅದ್ದೂರಿಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.

 

Related Articles

Back to top button