ಇತರೆ

ಹೋಂಸ್ಟೇನಲ್ಲಿ ವಿದೇಶಿ ಮಹಿಳೆಗೆ ಪಾನಕದಲ್ಲಿ ಮತ್ತು ಬರುವ ಔಷಧ ನೀಡಿ ಅತ್ಯಾಚಾರ!

Views: 100

ಕನ್ನಡ ಕರಾವಳಿ ಸುದ್ದಿ: ವಿದೇಶಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ನಡೆದಿದೆ. ಕುಟ್ಟ ಗ್ರಾಮದ ದೇವಿ ವಿಲ್ಲಾ ಎಂಬ ಹೋಂಸ್ಟೇಯಲ್ಲಿ ಅಮೇರಿಕಾದ ವಾಷಿಂಗ್ಟನ್ ಮೂಲದ ಮಹಿಳೆಯ ಮೇಲೆ ಜಾರ್ಖಂಡ್ ಮೂಲದ ವೃಜೇಶ್ ಎಂಬಾತ ಅತ್ಯಾಚಾರ ನಡೆಸಿರುವುದಾಗಿ ಹೇಳಲಾಗಿದೆ.

ಸಿಹಿ ಪಾನಕದಲ್ಲಿ ಮತ್ತು ಬರುವ ಔಷಧಿ ಬೆರೆಸಿದ ಬಳಿಕ ಅತ್ಯಾಚಾರ ನಡೆದಿರುವುದಾಗಿ ಸಂತ್ರಸ್ತ ಮಹಿಳೆ ಉಲ್ಲೇಖಿಸಿದ್ದು ಮೂರು ದಿನಗಳ ಹಿಂದೆ ನಡೆದಿರುವ ಈ ಘಟನೆಯನ್ನು ಮುಚ್ಚಿ ಹಾಕಲು ಹೋಂಸ್ಟೇ ಮಾಲಕ ವಿಶಾಲ್, ಜನಪ್ರತಿನಿಧಿಯೊಬ್ಬರ ಮೂಲಕ ಭಾರೀ ಯತ್ನ ನಡೆಸಿದ್ದಾಗಿ ತಿಳಿದುಬಂದಿದೆ.

ಘಟನೆ ನಡೆದ ಬಳಿಕ ಮೂರು ದಿನ ಸಂತ್ರಸ್ತೆ ಯಾರನ್ನೂ ಸಂಪರ್ಕಿಸದಿರಲು ವೈಫೈ ಸೌಲಭ್ಯವನ್ನು ಹೋಂಸ್ಟೇ ಮಾಲಕ ಸ್ಥಗಿತಗೊಳಿದ್ದರೆಂಬ ಆರೋಪವೂ ಕೇಳಿ ಬಂದಿದ್ದು ಮೂರು ದಿನದ ಬಳಿಕ ತಾನು ಮೈಸೂರಿಗೆ ತೆರಳುವುದಾಗಿ ಹೇಳಿ ಹೊರಟ ಸಂತ್ರಸ್ತೆ, ಬಳಿಕ ಅಮೆರಿಕಾದಲ್ಲಿರುವ ರಾಯಭಾರಿ ಕಚೇರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಅಮೇರಿಕಾದ ರಾಯಭಾರ ಕಚೇರಿ ಅಧಿಕಾರಿಗಳು ಮೈಸೂರಿನಲ್ಲಿನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಇಮೇಲ್ ಮೂಲಕ ಸಂಪರ್ಕಿಸಿದ ಮೇರೆಗೆ, ಅಲ್ಲಿನ ಅಧಿಕಾರಿಗಳ ಸೂಚನೆಯನ್ವಯ ಇದೀಗ ಪ್ರಕರಣ ದಾಖಲಾಗಿ, ಹೋಂಸ್ಟೇ ಮಾಲಕ ವಿಶಾಲ್ ಹಾಗೂ ಅತ್ಯಾಚಾರದ ಆರೋಪಿ ವೃಜೇಶ್’ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹಾಗೂ ಚೆನ್ನೈನ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಈಗಾಗಲೇ ಕೊಡಗಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Related Articles

Back to top button
error: Content is protected !!