ಬೆಂಗಳೂರಿನ ಪದ್ಮಶಾಲಿ ಪತ್ರಿಕೆಯ ಸಂಪಾದಕ ಸಾಮದೇಶಿ ಟಿ.ನಾಗರಾಜು ಹೃದಯಾಘಾತದಿಂದ ನಿಧನ

Views: 88
ಕನ್ನಡ ಕರಾವಳಿ ಸುದ್ದಿ: ಸುಧೀರ್ಘವಾಗಿ ಹಲವಾರು ಎಡರು ತೊಡರುಗಳ ನಡುವೆಯೂ ನಡೆದುಕೊಂಡು ಬರುತ್ತಿರುವ ಬೆಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ನೇಕಾರ ಸಮಾಜದ ಅತೀ ಹಿರಿಯ ಪತ್ರಿಕೆ, ಪದ್ಮಶಾಲಿ ಪತ್ರಿಕೆಯ ಸಂಪಾದಕರಾದ ಶ್ರೀಯುತ ಸಾಮದೇಶಿ ಟಿ. ನಾಗರಾಜುರವರು ( 70 ವರ್ಷ ) ಜ.18ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಮೃತರು ಪುತ್ರಿ,ಪುತ್ರ, ಅಸಂಖ್ಯಾತ ಬಂಧುಬಳಗ, ಪತ್ರಿಕಾ ಬಳಗ, ಚಂದಾದಾರರನ್ನು ಅಗಲಿದ್ದಾರೆ.
47ವರ್ಷಗಳಿಂದ ತನ್ನ ಪತ್ನಿ ದಿ| ಗುಣಶೀಲ ಅವರೊಡನೆ ಪತ್ರಿಕೆಯನ್ನು ನಡೆಸಿಕೊಂಡು ಬರುತಿದ್ದು 3 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು.
ಶ್ರೀಯುತರು ದಿಟ್ಟ ನೇರ ನುಡಿಯ ಸಂಪಾದಕ್ವತ್ವಕ್ಕೆ ಹೆಸರುವಾಸಿಯಾಗಿದ್ದು, ಸಮಾಜದ ಎಡರು ತೊಡರುಗಳನ್ನು ಕುಂದುಕೊರತೆಗಳನ್ನು ತನ್ನ ಸಂಪಾದಕೀಯದ ಮೂಲಕ ಎತ್ತಿತೋ ರಿಸುವುದಲ್ಲದೆ ಮಾರ್ಗದರ್ಶನ ಕೂಡಾ ಮಾಡುತ್ತಿದ್ದರು.
ಅವರು ಬೆಂಗಳೂರಿನ ಪದ್ಮಶಾಲಿ ಸೌಹಾರ್ದ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಹಾಲಿ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದು, 2025-2030 ರ ನಿರ್ದೇಶಕ ಮಂಡಳಿ ಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಹಾಲಿ ಆಡಳಿತ ಮಂಡಳಿಯ ಅವಧಿಯಲ್ಲಿ ಸೌಹಾರ್ದ ಸೊಸೈಟಿಯು 3769 ಸದಸ್ಯರನ್ನು ಹೊಂದಿದ್ದು, ದುಡಿಯುವ ಬಂಡವಾಳವು ರೂ.5609.63 ಲಕ್ಷ ಹಾಗೂ ನಿವ್ವಳ ಲಾಭವು ರೂ.158.67 ಲಕ್ಷ ಕ್ಕೆ ಏರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪದ್ಮಶಾಲಿ ಪತ್ರಿಕೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರಸಿದ್ಧಿಯನ್ನು ಪಡೆದಿದ್ದು, ಮುಖ್ಯವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚಿನ ಚಂದಾದಾರರನ್ನು ಹೊಂದಿರುವುದಲ್ಲದೆ ಮೂರೂ ಜಿಲ್ಲೆಯ ನೇಕಾರ ಸಮಾಜಭಾಂದವರಿಗೆ ಅಚ್ಚುಮೆಚ್ಚಿನ ಪತ್ರಿಕೆಯಾಗಿರುತ್ತದೆ.
ಇನ್ನು ಮೂರು ವರ್ಷಗಳಲ್ಲಿ ದಕ್ಷಿಣದ ಮೂರು ಜಿಲ್ಲೆಯ ಅಭಿಮಾನಿಗಳನ್ನು ಕೂಡ ಸೇರಿಸಿಕೊಂಡು ಪತ್ರಿಕೆಯ 50ನೇ ವರ್ಷದ ಸಮಾರಂಭವನ್ನು ಅದ್ಧೂರಿಯಾಗಿ ಜರಗಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.
ಶ್ರೀಯುತರ ಅಗಲುವಿಕೆ ಇಡೀ ನೇಕಾರ ಸಮಾಜ ಹಾಗೂ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.
ಶ್ರೀಯುತರ ಆತ್ಮಕ್ಕೆ ಪದ್ಮಶಾಲಿ ಕುಲದೇವರು ಶ್ರೀ ಮಾರ್ಕಂಡೇಶ್ವರ ಶ್ರೀ ದೇವರು ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಹಾಗೂ ಅವರ ಅಗಲುವಿಕೆಯಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಬಂಧುಗಳಿಗೆ ನೀಡಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ
ವರದಿ: ಬಿ. ವಿಠ್ಠಲ ಶೆಟ್ಟಿಗಾರ್ ಉಡುಪಿ. ಪದ್ಮಶಾಲಿ ಪತ್ರಿಕೆಯ ಉಡುಪಿ ಪ್ರತಿನಿಧಿ