ಕಾಳಾವರ ಭಗತ್‌ಸಿಂಗ್ ಕ್ರಾಂತಿಕಾರಿ ಬಳಗ: ದಶಮಾನೋತ್ಸವದ ಶಿವರಾತ್ರಿ ಸಂಭ್ರಮ
Views: 71
ಕನ್ನಡ ಕರಾವಳಿ ಸುದ್ದಿ:ಕಾಳಾವರ ಭಗತ್‌ಸಿಂಗ್ ಕ್ರಾಂತಿಕಾರಿ ಬಳಗ, ಕಾಳಾವರ ಘಟಕ, ಕೋಟೇಶ್ವರ ವಲಯದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ)ಮಹಿಳಾ ಭಜನಾ ಮಂಡಳಿ ವತಿಯಿಂದ ದಶಮಾನೋತ್ಸವದ ಶಿವರಾತ್ರಿ ಸಂಭ್ರಮ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಫೆ.15ರಂದು ನಡೆಯಿತು
ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಹೆಗ್ಡೆ ಶಾನಾಡಿ ಕಾರ್ಯಕ್ರಮ ಉದ್ಘಾಟಿಸಿ,ಸಮಾಜದಲ್ಲಿ ಒಗ್ಗಟ್ಟು ಮೂಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಾಗ ಸಮುದಾಯದ ಏಳಿಗೆಯೊಂದಿಗೆ ಸಂಘಟನಾ ಶಕ್ತಿ ಮತ್ತು ಸೇವಾ ಮನೋಭಾವನೆ ಬೆಳೆಯುತ್ತದೆ ಎಂದರು.
ನಿಕಟಪೂರ್ವ ಪ್ರಾಂಶುಪಾಲರಾದ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಮಾತನಾಡಿ, ಅಂತರಂಗದ ಶುದ್ದಿಯಿಂದ ಭಕ್ತಿ, ಶ್ರದ್ಧೆಯಿಂದ ದೇವರನ್ನು ಆರಾಧಿಸಿದಾಗ ನಮ್ಮ ಭಕ್ತಿಗೆ ದೇವರು ಒಲಿದು ಯಾವುದಾದರೂ ರೂಪದಲ್ಲಿ ಅನುಗ್ರಹ ನೀಡುತ್ತಾನೆ ಎಂದರು
ನಮ್ಮ ಪ್ರಗತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ(ರಿ.) ಕಾಳಾವರ ಜಿಲ್ಲಾ ತರಬೇತಿ ಸಂಯೋಜಕರು ಹಾಗೂ ಮುಖ್ಯ ಕಾರ್ಯದರ್ಶಿ ಮೋಹನಚಂದ್ರ ಕಾಳಾವರ್ಕಾರ್ ಮಾತನಾಡಿ, ಯುವಕರು ಸದೃಢರಾದಾಗ ಜವಾಬ್ದಾರಿಯುತ ನಾಗರೀಕನಾಗಿ, ನಮ್ಮ ಭವಿಷ್ಯವೂ ಉನ್ನತ ಸ್ಥಾನಕ್ಕೆ ಏರುತ್ತದೆ ಎಂದರು.
ವೇದಿಕೆಯಲ್ಲಿ ಕೋಟೇಶ್ವರ ವ್ಯವಸಾಯ ಸಹಕಾರಿ ಸೇವಾ ಬ್ಯಾಂಕ್ ನಿರ್ದೇಶಕರು ಭರತ್ ಕುಮಾರ್ ಶೆಟ್ಟಿ, ಕ್ಲಾಸ್ ಫಸ್ಟ್ ಪಿ.ಡಬ್ಲ್ಯೂ.ಡಿ. ಕಂಟ್ರ್ಯಾಕ್ಟರ್ ಸುಭೋದ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಶ್ರೀಮತಿ ಜ್ಯೋತಿ, ಭಗತ್ ಸಿಂಗ್ ಕ್ರಾಂತಿ ಬಳಗದ ಅಧ್ಯಕ್ಷರಾದ ನಿತ್ಯಾನಂದ ಕಾಳಾವರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚೆಸ್ ಚಾಂಪಿಯನ್ ಬೆಳ್ಳಿ ಪದಕದ ವಿಜೇತೆ ಆರಾಧ್ಯ ಶ್ರೀಕಾಂತ್ ಶೆಟ್ಟಿ ಸಲ್ವಾಡಿ, ವಿವಿಧ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಉಪನ್ಯಾಸಕ ನಾಗರಾಜ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಅಮೇಜಿಂಗ್ ಸ್ಟೆಪರ್ ಡ್ಯಾನ್ಸ್ ಕಂಚುಗೋಡು ತ್ರಾಸಿ ಇವರಿಂದ ನೃತ್ಯ ಸಿಂಚನ ತ್ರಿನೇತ್ರ ಕಲಾತಂಡ ಇವರಿಂದ ಗಗ್ಗರ ದೈವದನಿ ನಾಟಕ ಪ್ರದರ್ಶನ ನಡೆಯಿತು.









