ಸಾಮಾಜಿಕ

ಮಹಿಳೆಯೊಂದಿಗೆ ಗುರೂಜಿ ಅಕಮ ಸಂಬಂಧ: ದೂರು ನೀಡಿದ್ದಕ್ಕೆ ಹತ್ಯೆ, ಜ್ಯೋತಿಷಿ ಸೇರಿ 7 ಮಂದಿ ಬಂಧನ

Views: 231

ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಅವರಗುಪ್ಪ ಗ್ರಾಮದಲ್ಲಿ ಗಂಡ-ಹೆಂಡತಿ ಮಹೇಶ್- ಸುಚಿತ್ರಾ ನಡುವೆ ನಡೆಯುತ್ತಿದ್ದ ಜಗಳದ ಮಧ್ಯೆ ವಸಂತ್ ನಾಯ್ಕ್ ಬಂದಿದ್ದಾರೆ. ವಸಂತ್ ನಾಯ್ಕ್ ಗೆ ಸುಚಿತ್ರಾ ಟೀಮ್ ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಈ ಕೇಸ್ ನಲ್ಲಿ ಜ್ಯೋತಿಷಿ ಕಮಲಾಕರ್ ಪಾತ್ರ ಕೂಡ ಇದ್ದು ಜ್ಯೋತಿಷಿಯ ಬಂಧನವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ವಸಂತ ನಾಯ್ಕ್ ( 41) ಎಂಬ ವ್ಯಕ್ತಿಯ ಹತ್ಯೆ ನಡೆದಿದೆ. ಈ ಕೇಸ್ ನಲ್ಲಿ ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಗುರೂಜಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಚಿತ್ರಾ ಎಂಬಾಕೆಗೆ ಮಹೇಸ್ ಜೊತೆಗೆ ವಿವಾಹವಾಗಿತ್ತು. ಆದರೇ, ಗಂಡ- ಹೆಂಡತಿಯ ಸಂಬಂಧ ಸರಿ ಇರಲಿಲ್ಲ. ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೊನೆಗೆ ಗಂಡನನ್ನು ಬಿಟ್ಟು ಬಂದು ಸೀದಾ ಕಮಲಾಕರ್ ಮನೆಯಲ್ಲೇ ವಾಸ ಮಾಡುತ್ತಿದ್ದಳು. ಜ್ಯೋತಿಷಿ ಕಮಲಾಕರ್ ಹಾಗೂ ಸುಚಿತ್ರಾ ನಡುವೆ ಅನೈತಿಕ ಸಂಬಂಧವೂ ಇತ್ತು. ಕಳೆದ 6 ತಿಂಗಳಿನಿಂದ ಸುಚಿತ್ರಾ ತನ್ನ ಗಂಡ ಮಹೇಶ್ ನಿಂದ ದೂರ ಇದ್ದಳು. ಸುಚಿತ್ರಾ ಜೊತೆಯೇ ಮಗಳು ಸುಮಶ್ರೀ ಕೂಡ ಇದ್ದಳು. ಆದರೇ, ಮಗಳು ಸುಮಶ್ರೀಗೆ ತಾಯಿ ಸುಚಿತ್ರಾನೇ ಹಿಂಸೆ ಕೊಡುತ್ತಿದ್ದಳು. ಈ ವಿಷಯವನ್ನು ಮಗಳು ಸುಮಶ್ರೀ , ತನ್ನ ತಂದೆ ಮಹೇಶ್ ಗೆ ಪೋನ್ ಮೂಲಕ ತಿಳಿಸಿದ್ದಾಳೆ. ಅಲ್ಲಿಂದ ವಾಪಸ್ ಅವರಗುಪ್ಪ ಗ್ರಾಮದ ನಮ್ಮ ಮನೆಗೆ ಬಂದು ಬಿಡುವಂತೆ ತಂದೆ ಮಹೇಶ್, ಮಗಳು ಸುಮಶ್ರೀಗೆ ಹೇಳಿದ್ದಾರೆ. ಅದರಂತೆ ಸುಮಶ್ರೀ, ತಂದೆ ಮನೆಗೆ ಶಿವಮೊಗ್ಗದ ಬಂದಿದ್ದಾಳೆ.

ಶಿವಮೊಗ್ಗದಲ್ಲಿ ಮಗಳು ಸುಮಶ್ರೀ ಏಕಾಏಕಿ ನಾಪತ್ತೆಯಾಗಿರುವುದನ್ನು ಕಂಡ ತಾಯಿ ಸುಚಿತ್ರಾ, ತನ್ನ ಮಗಳಿಗಾಗಿ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ಮಗಳು ಸುಮಶ್ರೀ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ಇರೋದು ಗೊತ್ತಾಗಿದೆ. ಹೀಗಾಗಿ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಸೇರಿದಂತೆ ಏಳೆಂಟು ಮಂದಿಯ ತಂಡ ಅವರಗುಪ್ಪ ಗ್ರಾಮಕ್ಕೆ ಬಂದಿದೆ. ಈ ವೇಳೆ ಗಂಡ- ಹೆಂಡತಿಯರಾದ ಮಹೇಶ್- ಸುಚಿತ್ರಾ ನಡುವೆ ವಾಗ್ವಾದ, ಜಗಳ ನಡೆದಿದೆ.

ಈ ವಾಗ್ವಾದ ತಾರಕಕ್ಕೇರಿದಾಗ, ಸುಚಿತ್ರಾ ಟೀಮ್, ಮಹೇಶ್ ಮೇಲೆ ಹಲ್ಲೆಗೆ ಯತ್ನಿಸಿದೆ. ಈ ವೇಳೆ ಮಹೇಶ್ ಸೋದರ ವಸಂತ್ ನಾಯ್ಕ್ ಅಡ್ಡ ಬಂದಿದ್ದಾರೆ. ಅಡ್ಡ ಬಂದ ವಸಂತ್ ನಾಯ್ಕ್ ಗೆ ಸುಚಿತ್ರಾ ಟೀಮ್ ಚಾರು ಇರಿದಿದೆ. ವಸಂತ್ ನಾಯ್ಕ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ವಸಂತ್ ನಾಯ್ಕ್ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಈ ವಸಂತ್ ನಾಯ್ಕ್ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಿದ್ದಾಪುರ ಪೊಲೀಸರು ಚಾಕು ಇರಿದ ಸುಚಿತ್ರಾ, ಆಕೆಯ ತಂದೆ ಲೋಕನಾಥ್, ಜ್ಯೋತಿಷಿ ಕಮಲಾಕರ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

 

Related Articles

Back to top button
error: Content is protected !!