2 ಮಕ್ಕಳ ತಾಯಿ ಹಣಕ್ಕಾಗಿ ಮತ್ತೊಂದು ಮದುವೆ: ಕಳ್ಳಾಟ ಬಯಲಾದಾಗ ಎಸ್ಕೇಪ್ ಆಗಲು ಯತ್ನಿಸಿ ಸಿಕ್ಕಿಬಿದ್ದ ಆಂಟಿ
Views: 93
ಕನ್ನಡ ಕರಾವಳಿ ಸುದ್ದಿ: ಮದುವೆಯಾಗಿ 2 ಮಕ್ಕಳ ತಾಯಿಯಾಗಿರುವ ರೇಖಾ ಮತ್ತೊಂದು ಮದುವೆಯಾಗಿ ಸಿಕ್ಕಿಬಿದ್ದಿದ್ದಾಳೆ.
ಮದುವೆಗೆ ಬಂದ ಹುಡುಗರಿಗೆ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ವಿವಾಹಿತ ಮಹಿಳೆಯೊಬ್ಬರು, ಹಾವೇರಿ ಜಿಲ್ಲೆಯಲ್ಲಿ ತನಗೆ ಇನ್ನೂ ಮದುವೆಯಾಗಿಲ್ಲ ಎಂದು ಎರಡೂವರೆ ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದು ರವಿಚಂದ್ರ ಎಂಬ ಯುವಕನನ್ನು ವಿವಾಹವಾಗಿದ್ದಾಳೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ರವಿಚಂದ್ರ ಎಂಬ ಯುವಕನನ್ನು ವಿವಾಹಿತ ಮಹಿಳೆ ರೇಖಾ ಎಂಬಾಕೆ ವಿವಾಹವಾಗಿದ್ದಾಳೆ. ಆದರೇ, ಮದುವೆಯಾದ ಒಂದೇ ವಾರದಲ್ಲಿ ರೇಖಾಳ ಕಳ್ಳಾಟ ಬಯಲಾಗಿದೆ. ರೇಖಾಳಿಗೆ ಆಕೆಯ ಮಕ್ಕಳು ಪೋನ್ ಮಾಡಿದಾಗ, ಆ ಕಾಲ್ ಅನ್ನು ರವಿಚಂದ್ರ ಪೋಷಕರು ರೀಸೀವ್ ಮಾಡಿ ಮಾತನಾಡಿದ್ದಾರೆ. ಆ ವೇಳೆ ಮಕ್ಕಳು, ರೇಖಾ ನಮ್ಮ ತಾಯಿ ಎಂದು ರವಿಚಂದ್ರ ಪೋಷಕರಿಗೆ ಹೇಳಿದ್ದಾರೆ. ಇದರಿಂದಾಗಿ ರವಿಚಂದ್ರ ಪೋಷಕರಿಗೆ ರೇಖಾಗೆ ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿರುವುದು ಗೊತ್ತಾಗಿದೆ.
ಹಣದ ಆಸೆ, ಮೋಸ ಮಾಡುವ ಉದ್ದೇಶದಿಂದಲೇ ರೇಖಾ, ರವಿಚಂದ್ರನನ್ನು ಮದುವೆಯಾಗಿರುವುದು ಸ್ಪಷ್ಟವಾಗಿದೆ. ಮದುವೆ ಮಾಡಿಸುವುದಾಗಿ ಬ್ರೋಕರ್ ಒಬ್ಬರು ಎರಡೂವರೆ ಲಕ್ಷ ರೂಪಾಯಿ ಹಣವನ್ನು ರವಿಚಂದ್ರ ಪೋಷಕರಿಂದ ಪಡೆದಿದ್ದಾರೆ. ಅದಕ್ಕೆ ಪೋಟೋ ಸಾಕ್ಷ್ಯ ಕೂಡ ಇದೆ.
ಆದರೆ ಮದುವೆ ಆಗಿ ಕೆಲವೇ ದಿನಗಳಲ್ಲಿ ರೇಖಾ ಕಳ್ಳಾಟ ಬಯಲಾಗಿದೆ. ತನ್ನ ಬಂಡವಾಳ, ಕಳ್ಳಾಟ ಬಯಲಾಗುತ್ತಿದ್ದಂತೆ ರೇಖಾ, ತುಮ್ಮಿನಕಟ್ಟಿ ಗ್ರಾಮದಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ತಕ್ಷಣವೇ ತುಮ್ಮಿನಕಟ್ಟಿ ಗ್ರಾಮಸ್ಥರು ರೇಖಾಳನ್ನು ಹಿಡಿದು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.






