ಜನಮನ

ಬಿಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್‌ ನೀಡಿದ ಕೇಂದ್ರ ಸರ್ಕಾರ 

Views: 273

ಕನ್ನಡ ಕರಾವಳಿ ಸುದ್ದಿ:  ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ಮುಂದುವರೆದಿದೆ. ಇದೀಗ ಕೇಂದ್ರ ಸರ್ಕಾರ ಕಳುಹಿಸಿರುವ ವರದಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಮತ್ತೊಂದು ಬಿಗ್ ಕೊಟ್ಟಿದೆ.

ರಾಜ್ಯದಲ್ಲಿ ಅಕ್ರಮವಾಗಿ ಬಿಪಿಎಲ್‌ ಪಡಿತರ ಚಿಟಿಗಳನ್ನು ಹೊಂದಿರುವುದರ ವಿರುದ್ಧ ಕೇಂದ್ರ ರಾಜ್ಯ ಸರ್ಕಾರಗಳು ಜಂಟಿ ಸಮರ ಸಾರಿವೆ. ಈ ಹಿನ್ನೆಲೆ ರಾಜ್ಯದಲ್ಲಿ ನಕಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್‌ ಎದುರಾದಂತಾಗಿದೆ. ದಾಖಲೆ ಪ್ರಕಾರ, 7.5 ಎಕ್ಟೇರ್ (3.035 ಹೆಕ್ಟೇರ್‌) ಭೂಮಿ ಹೊಂದಿದ್ದರೂ 34,710 ಕುಟುಂಬಗಳು ಬಿಪಿಎಲ್‌ ಕಾರ್ಡ್‌ದಾರರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕಂದ್ರೆ, ಅದಕ್ಕೆ ಆಧಾರ್‌ ನಂಬರ್‌ ಜೋಡಣೆ ಕಡ್ಡಾಯವಾಗಿದೆ. ಇದನ್ನೇ ಪ್ರಮುಖ ದಾಖಲೆಯನ್ನಾಗಿ ಮಾಡಿ ಅಕ್ರಮ ಬಿಪಿಎಲ್‌ ಕಾರ್ಡ್‌ದಾರರನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಿ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಿದೆ

ಮಾಹಿತಿ ಪ್ರಕಾರ, 7,76,206 ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 2,09,048 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸಲಾಗಿದೆ. ಇದೇ ಆಧಾರದಲ್ಲಿ ರಾಜ್ಯ ಸರ್ಕಾರವು ಅಕ್ರಮ ಬಿಪಿಎಲ್‌ ಕಾರ್ಡ್‌ ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಖಡಕ್‌ ಸೂಚನೆಯನ್ನು ನೀಡಿದೆ.

ಬ್ಯಾಂಕ್‌ ಲೋನ್‌, ಖಾಸಗಿ ಹಾಗೂ ಸರ್ಕಾರಿ ಉದ್ಯೋಗಿಗಳು, ವ್ಯಾಪಾರ ನಡೆಸುವವರು ಐಟಿ ರಿಟರ್ನ್ಸ್‌ ಫೈಲ್ ಮಾಡಿಸುತ್ತಿದ್ದು, ಇದರಿಂದ ವಾರ್ಷಿಕ 1.20 ಲಕ್ಷ ರೂಪಾಯಿಗೂ ಅಧಿಕ ಆದಾಯ ಇರುವವರ ಸ್ಪಷ್ಟ ಮಾಹಿತಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಿಕ್ಕಿದೆ. ಇದೇ ಅಂಕಿ-ಸಂಕಿಗಳ ಪ್ರಕಾರ, ರಾಜ್ಯದಲ್ಲಿ 1.20 ಲಕ್ಷ ರೂಪಾಯಿಗೂ ಹೆಚ್ಚು 5,80,415 ಮಂದಿ ಬಿಪಿಎಲ್‌ ಪಡಿತರ ಹೊಂದಿದ್ದು, ಅದರಲ್ಲಿ 1,00,592 ಪಡಿತರ ಚೀಟಿದಾರರ ಮೇಲೆ ಕ್ರಮ ಜರುಗಿಸಿ ಎಪಿಎಲ್‌ಗೆ ವರ್ಗಾಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೀಗೆ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕೆಲಸವನ್ನು ಸರ್ಕಾರ ಮುಂದುವರೆಸಿದೆ. ಇದೀಗ ಕೇಂದ್ರ ಸರ್ಕಾರ ನೀಡಿದ ವರದಿ ಬಿಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಈ ಗಾಳದಿಂದ ನಕಲಿ ಬಿಪಿಎಲ್‌ ಕಾರ್ಡ್‌ದಾರರು ತಪ್ಪಿಸಿಕೊಳ್ಳದಂತೆ ಆಗಿದೆ.

 

 

Related Articles

Back to top button