ಧಾರ್ಮಿಕ

ಬಾರ್ಕೂರು: ಅಷ್ಟ- ಬಂಧ ಬ್ರಹ್ಮಕಲಶೋತ್ಸವ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಚನ 

Views: 164

ಕನ್ನಡ ಕರಾವಳಿ: ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಅಷ್ಟ- ಬಂಧ ಬ್ರಹ್ಮಕಲಕೋತ್ಸವ ಹಾಲುಹಬ್ಬ, ವಾರ್ಷಿಕ ಪೂಜೆ, ಗೆಂಡ ಸೇವೆ ಅಂಗವಾಗಿ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಪದ್ಮವಿಭೂಷಣ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರು ಆಶೀರ್ವಚನ ನೀಡಿದರು.

ಭಗವಂತನ ಸಾನಿಧ್ಯವನ್ನು ಉಳಿಸಿಕೊಂಡು ಧರ್ಮದ ಸೇವಾ ಕಾರ್ಯ ಮಾಡಿದರೆ ಪುಣ್ಯ ಸಂಪಾದನೆಯಾಗುತ್ತದೆ. ಸತ್ಕಾರ್ಯ ಮಾಡಿದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಅಧರ್ಮ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಸಾವಿರಾರು ವರ್ಷಗಳಿಂದ ಈ ಸೀಮೆಯನ್ನು ರಾಜ ಮಹಾರಾಜರು ಆಳಿ ಎಲ್ಲಾ ದೇವಸ್ಥಾನಗಳು ಉಳಿಯಲು ಸಾಧ್ಯವಾಯಿತು ಎಂದು ಆಶೀರ್ವಚನದಲ್ಲಿ ಹೇಳಿದರು.

ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದ‌ರ್ ಮಾತನಾಡಿ ,ಉಡುಪಿಯಲ್ಲಿ ಬಾರ್ಕೂರು ದೇವರ ನಾಡು. ದೇವರು ಧರ್ಮದ ಬಗ್ಗೆ ಅರಿತುಕೊಂಡು ಒಡನಾಡಿಯಾಗಿ ಬಾಳಿ ಸದ್ಬುದ್ದಿ ಸಂಸ್ಕಾರ ಬೆಳಸಿದಾಗ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯಲು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು ಎಂದರು.

ದೇವಸ್ಥಾನದ ತಂತ್ರಿಗಳು ವೇದಮೂರ್ತಿ ಶ್ರೀ ಎನ್. ರಮೇಶ್ ಭಟ್ ಶುಭ ಹಾರೈಸಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾರ್ಕೂರು ರಂಗನಕೇರಿಶ್ರೀ ಬಿ. ಶ್ರೀನಿವಾಸ ಶೆಟ್ಟಿಗಾ‌ರ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ದೇಗುಲ ವತಿಯಿಂದ ಹಾಗೂ ಶೆಟ್ಟಿಗಾರ ಇಂಡಸ್ಟ್ರೀಸ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಾರ್ಕೂರು ರಂಗನಕೇರಿ, ಶೌರ್ಯ ತಂಡದವರಿಂದ ವೀರೇಂದ್ರ ಹೆಗ್ಗಡೆಯವರನ್ನು ಸನ್ಮಾನಿಸಲಾಯಿತು.

ದೇಗುಲದ ಸಾವಿತ್ರಿ ನಾರಾಯಣ ಶೆಟ್ಟಿಗಾರ್ ಸುರತ್ಕಲ್, ಹೆಚ್.ಎ. ಗೋಪಾಲ್ ಸುರತ್ಕಲ್, ಶ್ರೀಮತಿ ಕವಿತಾ ಮತ್ತು ಡಾ. ಜಯರಾಮ್ ಶೆಟ್ಟಿಗಾರ್, ಶ್ರೀಮತಿ ನಯನ ಡಾ. ಶಿವಪ್ರಸಾದ್ ಕೆ ಉಡುಪಿ, ಶ್ರೀಮತಿ ಆಶಾಲತಾ ಮತ್ತು ವಿಠ್ಠಲ್ ಶೆಟ್ಟಿಗಾರ್ ಕೆಳಾರ್ಕಳ ಬೆಟ್ಟು, ಮೀನಾಕ್ಷಿ ನಾರಾಯಣ್ ಶೆಟ್ಟಿಗಾರ ಮತ್ತು ಮಕ್ಕಳು ಚೇರ್ಕಾಡಿ, ಭಾನುಮತಿ ಮತ್ತು ಶ್ರೀ ಪುರುಷೋತ್ತಮ ಮಣಿಪಾಲ್, ಚಂದ್ರಾವತಿ ಮತ್ತು ಸದಾಶಿವ ಶೆಟ್ಟಿಗಾರ ಬ್ರಹ್ಮಾವರ, ಪ್ರೇಮ ಸದಾಶಿವ ಶೆಟ್ಟಿ ಬಾರ್ಕೂರು, ಯಶೋಧ ಶ್ರೀನಿವಾಸ ಶೆಟ್ಟಿಗಾರ ಬಾರ್ಕೂರು ರಂಗನಕೇರಿ, ಶ್ರೀಮತಿ ಶಾಂತ ಸಂಜೀವ ಶೆಟ್ಟಿಗಾರ ಬಾರ್ಕೂರು, ಹೇಮಲತಾ ಮತ್ತು ಡಾ ವಿ ಎಸ್ ಚಂದ್ರಶೇಖರ್ ಕೆಳಾರ್ಕಳಬೆಟ್ಟು, ದಾಮೋದರ ಶರ್ಮ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಅಧ್ಯಕ್ಷರು, ಬಾರಕೂರು ಗ್ರಾಮ ಪಂಚಾಯತ್, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಧನಂಜಯ ಶೆಟ್ಟಿ, ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ ಮಂಜುನಾಥ್ ರಾವ್,ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಕರಾವಳಿ, ಮಂಗಳೂರು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಬೋಳೂರು ಅಧ್ಯಕ್ಷರು ಬಾಲಕೃಷ್ಣ ಕಲ್ಬಾವಿ, ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಪ್ರಧಾನ ಆಡಳಿತ ಮೊಕ್ತೇಸರರಾದ ಜ್ಯೋತಿಪ್ರಸಾದ್ ಶೆಟ್ಟಿಗಾರ್, ಮುಲ್ಕಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿಗಾರ ಸಾಣೂರು, ಹಳೆಯಂಗಡಿ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಕಲ್ಲಾಪು ಅಧ್ಯಕ್ಷರು ಶ್ರೀ ಲೋಲಾದರ್ ಶೆಟ್ಟಿಗಾರ, ಬ್ರಹ್ಮಕಲಕೋತ್ಸವ ಸಮಿತಿಯ ಅಧ್ಯಕ್ಷ ಎಚ್ ಎ ಗೋಪಾಲ್, ದೇವಳದ ಆಡಳಿತ ಮೊಕ್ತೇಸರರಾದ ಡಾ. ಜಯರಾಮ ಶೆಟ್ಟಿಗಾರ್,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಮಾ ಲಕ್ಷ್ಮೀ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಬಿ. ಶ್ರೀನಿವಾಸ ಶೆಟ್ಟಿಗಾರ್ ಸ್ವಾಗತಿಸಿದರು. ದಾಮೋದರ್ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ.ಸಿ ವಂದಿಸಿದರು.

Related Articles

Back to top button
error: Content is protected !!