ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಮಾದಕ ದ್ರವ್ಯ ಮುಕ್ತ ಜಾಗೃತ” ಕಾರ್ಯಕ್ರಮ

Views: 150
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಮಾದಕ ದ್ರವ್ಯ ಮುಕ್ತ ಜಾಗೃತ” ಕಾರ್ಯಕ್ರಮ ನಡೆಯಿತು.
ಸ್ಥಳೀಯ ಪೊಲೀಸ್ ಅಧಿಕಾರಿಯದ ಶ್ರೀ ಶಂಕರ್ ಎಸ್ ಐ ಕಂಡ್ಲೂರು ಇವರು ವಿದ್ಯಾರ್ಥಿಗಳನ್ನು ಕುರಿತು ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ನಿರ್ದೇಶನದ ಮೂಲಕ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು. ಹಾಗೆಯೇ ಪ್ರತಿಯೊಬ್ಬರೂ ವಾಹನವನ್ನು ಚಲಾಯಿಸಲು ಲೈಸೆನ್ಸ್ ಅನ್ನು ಹೊಂದಬೇಕು ಹಾಗೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಅಪರಾಧ ಪ್ರತಿಯೊಬ್ಬರೂ ಕೂಡ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಧರಿಸಲೇಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಡ್ರಗ್ಸ್ ಸೇವನೆಯಿಂದ ಉಂಟಾದ ತೊಂದರೆಗಳ ಬಗ್ಗೆ ನಿರ್ದೇಶನದ ಮೂಲಕ ವಿವರಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಯಾವುದು ಉತ್ತಮ ಸ್ಪರ್ಶ ಯಾವುದು ಕೆಟ್ಟ ಸ್ಪರ್ಶ ಎಂದು ಪ್ರಾಯೋಗಿಕವಾಗಿ ತಿಳಿಸಿದರು. ವಿದ್ಯಾರ್ಥಿ ಸಹಾಯವಾಣಿ ಉಪಯೋಗ ಮತ್ತು ವಿದ್ಯಾರ್ಥಿ ಸಹಾಯವಾಣಿ ನಂಬರ್ ಅನ್ನು ನೀಡಿದರು ವಿದ್ಯಾರ್ಥಿಗಳಿಗೆ ಯಾರಿಂದಲ್ಲಾದರೂ ಯಾವುದಾದರೂ ರೀತಿಯ ತೊಂದರೆ ಉಂಟಾದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂದು ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಕುರಿತು “ಶಾಲೆಯಲ್ಲಿ ಶಿಕ್ಷೆ ಕಡಿಮೆಯಾದ ಕಾರಣ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು” ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ರೇಷ್ಮಾ ಅಡಪ ಶಿಕ್ಷಕ /ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ವನಿತಾ ಅವರು ಕಾರ್ಯಕ್ರಮ ನಿರೂಪಿಸಿದರು.






