ಶಿಕ್ಷಣ

ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಬಂಟ್ವಾಳದ ಅಮ್ಮ ಮಗಳು ಪಾಸ್‌ 

Views: 28

ಕನ್ನಡ ಕರಾವಳಿ ಸುದ್ದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ.ಇದರ ನಡುವೆ ಅಪರೂಪದ ಸಾಧನೆಯೊಂದು ನಡೆದಿದೆ. ಅಮ್ಮ ಮತ್ತು ಮಗಳು ಇಬ್ಬರು ಪರೀಕ್ಷೆ ಬರೆದು ಪಾಸ್‌ ಆಗಿದ್ದಾರೆ. ಈ ಅಪರೂಪದ ಘಟನೆ ನಡೆದಿರುವುದು ಬಂಟ್ವಾಳ ತಾಲೂಕಿನ ಕೈಕಂಬದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗಿದ್ದಾರೆ.

ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಹೇಮಶ್ರೀ, 562 ಅಂಕ ಪಡೆದಿದ್ದು, ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ತಾಯಿ ನೇತ್ರಾವತಿ ವಿ.ಆರ್‌ ಅವರು ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 257 ಅಂಕಗಳನ್ನು ಪಡೆದಿದ್ದು, ಈ ಮೂಲಕ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣಗೊಂಡಿದ್ದಾರೆ.

ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್‌ ಅವರ ಪತ್ನಿ ನೇತ್ರಾವತಿ ಅವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸುವ ಆಸೆ ಇದ್ದು, ಪತಿಯ ಪ್ರೋತ್ಸಾಹದಿಂದ ತಾವೂ ಪರೀಕ್ಷೆ ಬರೆದಿದ್ದಾರೆ.

Related Articles

Back to top button
error: Content is protected !!