ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಗೆ ಗ್ರೀನ್ ಡೇ ಮತ್ತು ವೆಜಿಟೇಬಲ್ಸ್ ಡೇ ಕಾರ್ಯಕ್ರಮ

Views: 31

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ನಲ್ಲಿ ಮಕ್ಕಳಿಗೆ ಗ್ರೀನ್ ಡೇ ಮತ್ತು ವೆಜಿಟೇಬಲ್ಸ್ ಡೇ ಕಾರ್ಯಕ್ರಮ ಅಗಸ್ಟ್ 2 ರಂದು ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಮಕ್ಕಳು ತಂದ ಹಸಿರು ಬಣ್ಣದ ವಸ್ತುಗಳು ಮತ್ತು ತರಕಾರಿಗಳನ್ನು ಅಲಂಕರಿಸಲಾಯಿತು. ನಂತರ ವಿವಿಧ ತರಕಾರಿಗಳ ಬಣ್ಣ,ರುಚಿ ಹಾಗೂ ಉಪಯೋಗಗಳ ಕುರಿತು ಮಕ್ಕಳು ಮಾತನಾಡಿದರು.

ಆನಂತರ ತರಕಾರಿಗಳಿಗೆ ಸಂಬಂಧಿಸಿದ ಶಿಶು ಗೀತೆ ಗಳನ್ನು ಅಭಿನಯಿಸಿ ಆನಂದಿಸಿದರು. ವಿವಿಧ ತರಕಾರಿಗಳ ಕ್ರಾಫ್ಟ್ ಉಡುಗೆಗಳನ್ನು ಧರಿಸಿ ಕ್ಯಾಟ್ ವಾಕ್ ಮಾಡಿದರು ಈ ಸಂದರ್ಭದಲ್ಲಿ ನಮ್ಮ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು ಆಡಳಿತಾಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿಯವರು ಮತ್ತು ಪ್ರಾಂಶುಪಾಲರಾದ ರೇಷ್ಮಾ ಅಡಪ ಅವರು ಉಪಸ್ಥಿತರಿದ್ದರು.

ವೈಶಾಲಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿಯರಾದ ಶ್ರೀಮತಿ ರಜಿನಿ ಮತ್ತು ಶ್ರೀಮತಿ ಸುಜಾತ ಸಹಕರಿಸಿದರು.

Related Articles

Back to top button
error: Content is protected !!