ಶಿಕ್ಷಣ

ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್: ಕಲಿಕಾ ಫಲಿತಾಂಶ ಹಾಗೂ ಬೋಧನಾ ವಿಧಾನಗಳ ಕುರಿತು ವಿಶೇಷ ಉಪನ್ಯಾಸ

Views: 25

ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಿಗಾಗಿ “ ಸಮಗ್ರ ಪ್ರಗತಿ ಪತ್ರಿಕೆಯ ಮೂಲ ಹಾಗೂ ಕಲಿಕಾ ಫಲಿತಾಂಶ ಮತ್ತು ಬೋಧನಾ ವಿಧಾನಗಳು “ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಮೇ.28ರಂದು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಎಂ ವಿ ಜೆ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರೂ, ಶಿಕ್ಷಣ ತಜ್ಞರೂ, ಸಿಬಿಎಸ್ ಸಿ ಮಾಸ್ಟರ್ ಟ್ರೈನರ್ ಶ್ರೀಮತಿ ವಂಶಿಪ್ರಿಯ ಅಮರ್ ರವರು ಉದ್ಘಾಟಿಸಿ ಮಾತನಾಡುತ್ತಾ – “ ಶೈಕ್ಷಣಿಕ ಹಂತದಲ್ಲಿ ಬೋಧನೆಯ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನ ಮತ್ತು ಪ್ರಗತಿಪತ್ರಿಕೆಯು ಮಹತ್ವದ್ದಾಗಿರುತ್ತದೆ. ಕಲಿಕಾ ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ಸಾಧಿಸುವುದಕ್ಕೆ ನವೀನ ರೀತಿಯ ಬೋಧನಾ ತಂತ್ರಗಳನ್ನು ನಾವು ಹೆಚ್ಚು ಹೆಚ್ಚು ಬಳಸಿಕೊಂಡು ಚಟುವಟಿಕೆ ಆಧಾರಿತ ಪಾಠ ಕ್ರಮದ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ವಹಿಸಿ ಮಾತನಾಡುತ್ತಾ – ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಯನ ಮತ್ತು ಅನುಭವಾತ್ಮಕ ವಿಚಾರಗಳನ್ನು ಹೆಚ್ಚು ಬಳಸಿಕೊಂಡು ತಮ್ಮ ಬೋಧನಾ ವಿಧಾನದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕರಾಗಬೇಕು ಎಂದರು.

ಪ್ರಾಂಶುಪಾಲರಾದ ಡಾ. ರೂಪ ಶೆಣೈರವರು ಶಿಕ್ಷಕರಿಗೆ ಶುಭ ಕೋರಿದರು. ಶಿಕ್ಷಕಿ ಮಮತಾ ಕುಮಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Related Articles

Back to top button
error: Content is protected !!