ಮಾಹಿತಿ ತಂತ್ರಜ್ಞಾನ
ಬೈಂದೂರು: ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಜೂಜಾಟ, ಮೊಬೈಲ್ ನೊಂದಿಗೆ ಆರೋಪಿ ವಶಕ್ಕೆ
Views: 21
ಕನ್ನಡ ಕರಾವಳಿ ಸುದ್ದಿ: ಉಪ್ಪುಂದ ಗ್ರಾಮದ ಪರಿಚಯ ಹೋಟೆಲ್‌ನ ದಕ್ಷಿಣ ಬದಿಯ ಗ್ಯಾರೇಜ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಮೇಲೆ ಟೋಕನ್ ನೀಡಿ ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುನಿಲ್ ಕುಮಾರ ಬಿ.ಎನ್. ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ದಾಳಿಯ ವೇಳೆ ವಾಟ್ಸಪ್ ಗ್ರೂಪ್ ಮೂಲಕ ಕೋಳಿ ಜೂಜಾಟ ನಡೆಸುತ್ತಿದ್ದ ಉಪ್ಪುಂದ ಗ್ರಾಮದ ಸಚಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೂಜಾಟಕ್ಕೆ ಬಳಸಲಾಗುತ್ತಿದ್ದ VIVO V20 ಮೊಬೈಲ್ ಫೋನ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






