ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂರು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಮುಂದಿನ ಸ್ಪರ್ಧೆಗೆ ಆಯ್ಕೆ

Views: 109

ಕನ್ನಡ ಕರಾವಳಿ ಸುದ್ದಿ: ಚಿತ್ರವೊಂದು ಸಾವಿರ ಪದಗಳಿಗೆ ಸಮಾನ. ಮಕ್ಕಳ ಹೃದಯದಲ್ಲಿ ಮೂಡಿದ ಕಲ್ಪನೆ ಅವರ ಕೈಯಲ್ಲಿ ಮೂಡಿಬರುವ ಚಿತ್ರಗಳಲ್ಲಿ ಜೀವನವನ್ನು ತೋರಿಸುತ್ತವೆ. ಕಲೆಯ ಪ್ರತಿಸ್ಪರ್ಶವೂ ಭಾವನೆಗಳ ಆಚೆ ಹೋಗುವ ಭಾಷೆಯಾಗಿದೆ”.

ವಿಜಯ ಕರ್ನಾಟಕ ಪತ್ರಿಕೆಯವರು ಆಯೋಜಿಸಲಿರುವ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಗೆ ತಮ್ಮ ಕಲಾ ನೈಪುಣ್ಯದಿಂದ ಆಯ್ಕೆಯಾದ ಮಕ್ಕಳಲ್ಲಿರುವ ಕಲ್ಪನಾ ಶಕ್ತಿ ಮತ್ತು ಭಾವನೆಗಳನ್ನು ಅಭಿವ್ಯಕ್ತ ಪಡಿಸುವ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯುಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯವರೊಂದಿಗೆ ಶ್ಯಾಮಿಲಿ ಸಭಾಭವನ ಅಂಬಲಪಾಡಿ ಉಡುಪಿ ಇಲ್ಲಿ ದಿನಾಂಕ 6/7/2025 ರಂದು ಆಯೋಜಿಸಲಿರುವ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಗೆ ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಾಚಿಸಿಂಗ್ 6ನೇ ತರಗತಿ,ನಿಶಾಂತ್ 8ನೇ ತರಗತಿ, ತ್ರಿವಾರಿ 10ನೇ ತರಗತಿ ಆಯ್ಕೆ ಆಗಿದ್ದಾರೆ.

ಈ ಮೂಲಕ ಶಾಲೆಯ ಕೀರ್ತಿಯನ್ನು ಜಿಲ್ಲಾ ಮಟ್ಟಕ್ಕೆಕೊಂಡೊಯ್ದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ,ಪ್ರಾಂಶುಪಾಲರು ಭೋದಕ /ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button