ಸಾಮಾಜಿಕ
ಪತ್ನಿ ವಾಹನಕ್ಕೆ ಡಿಕ್ಕಿ ಹೊಡೆದು ಹಿಂದಿನಿಂದ ಇರಿದ ಪತಿ ಪರಾರಿ

Views: 181
ಕನ್ನಡ ಕರಾವಳಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಗೆ ಹಿಂದಿನಿಂದ ಬಂದು ಚಾಕುವಿನಿಂದ ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪತಿಯಿಂದ ಹಲ್ಲೆಗೊಳಗಾದ ಪತ್ನಿ ಉದ್ದವ್ವ ಗಂಭೀರವಾಗಿ ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.ಕಾಟಕ್ಕೆ ಬೇಸತ್ತ ಪತ್ನಿ ತವರು ಮನೆಗೆ ತೆರಳಿದ್ದಳು. ತವರು ಮನೆಯವರೊಂದಿಗೆ ಸಂತೆಗೆಂದು ಗಾಡಿಯಲ್ಲಿ ಪಾಶ್ಚಾಪುರಕ್ಕೆ ಬಂದಿದ್ದ ವೇಳೆ ಮತ್ತೊಂದು ವಾಹನದಲ್ಲಿ ಬಂದ ಪತಿ ಹಾಲಪ್ಪ, ಪತ್ನಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಪತ್ನಿಗೆ ಹಿಂದಿನಿಂದ ಬಂದು ಚಾಕು ಇರಿದು ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪತಿ ಹಾಲಪ್ಪ ಕುಡಿದುಕೊಂಡು ಬಂದ ಹಾಲಪ್ಪ, ಪತ್ನಿಗೆ ಹೊಡೆಯುವುದು, ಕಿರಿಕುಳನೀಡುವುದು ಮಾಡುತ್ತಲೇ ಇದ್ದನಂತೆ. ಇದರಿಂದ ನೊಂದ ಪತ್ನಿ ತವರು ಸೇರಿದ್ದರೂ ಅಲ್ಲಿಗೆ ಬಂದು ಜಗಳವಾಡುತ್ತಿದ್ದನಂತೆ. ಇದೀಗ ಪತ್ನಿಗೆ ಚಾಕು ಇರಿದು ಪರಾರಿಯಾಗಿದ್ದು, ಪತ್ನಿ ಸ್ಥಿತಿ ಗಂಭೀರವಾಗಿದೆ.