ಪಣಂಬೂರು ಬೀಚ್ ನಲ್ಲಿ ಅಲೆಗಳು ರಭಸಕ್ಕೆ ಕೊಚ್ಚಿಹೋದ ಮೂವರು ಯುವಕರು ಸಮುದ್ರ ಪಾಲು

Views: 50
ಮಂಗಳೂರು: ವಿಹಾರಕ್ಕಾಗಿ ಕುಟುಂಬ ಸಮೇತರಾಗಿ ಆಗಮಿಸಿದ್ದು ಮೂವರು ಯುವಕರು ಸಮುದ್ರ ಪಾಲಾದ ಘಟನೆ ಭಾನುವಾರ ಸಂಜೆ ಪಣಂಬೂರ್ ಬೀಚ್ ನಲ್ಲಿ ನಡೆದಿದೆ.
ಫೆ.27 ರಂದು ಹಳೆಯಂಗಡಿಯು ಕೊಪ್ಪಳ ಅಣೆಕಟ್ಟಿನಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ದುರಂತ ಸಂಭವಿಸಿದೆ.
ನೀರುಪಾಲಾದ ಯುವಕರನ್ನು ಬಜ್ಪೆ ಪೋರ್ಕೊಡಿ ನಿವಾಸಿಗಳಾದ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಿಲನ್ (20), ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಕಂಪೆನಿಯಲ್ಲಿ ಮೇಲ್ವಿಚಾರಕನಾಗಿದ್ದ ನಾಗರಾಜ್ (24) ಎಂದು ಗುರುತಿಸಲಾಗಿದೆ
ಪಣಂಬೂರು ಬೀಚ್ ನಲ್ಲಿ ಕಡಲೋತ್ಸವ ನಡೆಯುತ್ತಿದ್ದು ಇದಕ್ಕಾಗಿ ಸಾವಿರಾರು ಮಂದಿ ಭಾಗವಹಿಸಿದ್ದರು. ಭಾನುವಾರ ಭಾರೀ ಗಾಳಿ ಇದ್ದು ಕಡಲಿನ ಅಬ್ಬರದ ಪರಿಣಾಮ ಸಮುದ್ರ ಸಾಹಸ ಕ್ರೀಡೆಗಳನ್ನು ನಿಲ್ಲಿಸಲಾಗಿತ್ತು ಮತ್ತು ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಯುವಕರು ಸೆಕ್ಯೂರಿಟಿ ಗಾರ್ಡ್ ಗಳ ಕಣ್ಣುತಪ್ಪಿಸಿ ಸಮುದ್ರಕ್ಕೆ ಈಜಾಡಲು ತೆರಳಿದ್ದು ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು ನೀರು ಪಾಲಾದ ಯುವಕರ ಪತ್ತೆ ಕಾರ್ಯ ನಡೆದಿದೆ.