ರಾಜಕೀಯ

ನೀವು ಕಟ್ಟಿದ ದೇವಾಲಯಕ್ಕೆ ನೀವೇ ಪೂಜಾರಿಗಳಾಗಿ ಮುಖ್ಯಮಂತ್ರಿ 

Views: 45

ಬೆಂಗಳೂರು: ‘ಕಲ್ಲು ಒಡೆದು, ಗುಡಿ ಕಟ್ಟುವವರು ನೀವು, ವಿಗ್ರಹ ತರುವವರು ನೀವು, ಆದರೆ, ನಿಮಗೆ ಪೂಜೆಗೆ ಅವಕಾಶವಿಲ್ಲ. ಹಾಗಾಗಿ, ನೀವೇ ದೇವಸ್ಥಾನ ಕಟ್ಟಿಕೊಂಡು, ನೀವೇ ಪೂಜಾರಿಗಳಾಗಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೂದ್ರರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿದ್ದಾಗ, ನಾರಾಯಣಗುರುಗಳು ಅವುಗಳನ್ನು ತಿರಸ್ಕರಿಸಿ, ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅದೇ ಮಾರ್ಗವನ್ನು ನೀವೂ ಅನುಸರಿಸಬೇಕು’ ಎಂದು ತಿಳಿಸಿದರು.

‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ನಡೆಯುತ್ತಿದೆ. ಆದರೆ, ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಎಲ್ಲರೂ ಕಾಯಕ ಅಂದರೆ ಉತ್ಪಾದನೆ ಮಾಡಬೇಕು. ದಾಸೋಹ ಅಂದರೆ ಎಲ್ಲರಿಗೂ ವಿತರಿಸಬೇಕು ಎಂಬುದು ಶರಣರ ಆಶಯ. ನಮ್ಮ ಸರ್ಕಾರದ ಕಾರ್ಯಕ್ರಮಗಳು ಕೂಡ ಇದಕ್ಕೆ ಪೂರಕವಾಗಿವೆ’ ಎಂದು ಹೇಳಿದರು.

ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಒಪ್ಪಬಾರದು. ಅವಕಾಶ ಸಿಕ್ಕವರು ಮುಂದೆ ಬಂದರು. ಅವಕಾಶ ಇಲ್ಲದವರು ಹಿಂದುಳಿದರು. ಹಣೆಬರಹ ಎನ್ನುವುದು ಬೋಗಸ್. ಜಾತಿ-ಧರ್ಮದ ಆಧಾರದಲ್ಲಿ ಮನುಷ್ಯರನ್ನು ಮನುಷ್ಯರು ದ್ವೇಷಿಸುವುದು ಅಮಾನವೀಯವಾದುದು ಎಂದು ವಿಶ್ಲೇಷಿಸಿದರು.

ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂಬುದು ಸೇರಿದಂತೆ ಭೋವಿ ಸಮುದಾಯ ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

Related Articles

Back to top button