ಸಾಂಸ್ಕೃತಿಕ
ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದು ಸೂರಾಲು ಯಕ್ಷಗಾನ ಮೇಳದ ವೇಷಧಾರಿ ದಾರುಣ ಸಾವು

Views: 175
ಕನ್ನಡ ಕರಾವಳಿ ಸುದ್ದಿ: ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಯುವ ಯಕ್ಷಗಾನ ಕಲಾವಿದ ರಂಜಿತ ಬನ್ನಾಡಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಕೊಪ್ಪ ಸಮೀಪದಲ್ಲಿ ಸೂರಾಲು ಮೇಳದ ಪ್ರದರ್ಶನ ಮಳೆಯಿಂದ ರದ್ದಾದ ಕಾರಣ ಮನೆಗೆ ವಾಪಾಸಾಗುತ್ತಿದ್ದ ವೇಳೆ ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ದ್ವಿಚಕ್ರ ವಾಹನ ಬಿಡುತ್ತಿದ್ದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಿಯರ ಸಹಕಾರದಿಂದ ಹಿಂಬದಿ ಸವಾರ ಸ್ತ್ರೀ ಪಾತ್ರಧಾರಿ ವಿನೋದ್ ರಾಜ್ ಎನ್ನುವವರು ಪಾರಾಗಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಿಯರ ಸಹಕಾರದಿಂದ ತುರ್ತು ವಾಹನದ ಮೂಲಕ ಮಣಿಪಾಲ ಖಾಸಗಿ ಅಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಕೊನೆಯುಸಿರೆಳೆದಾಗಿತ್ತು ಎಂದು ತಿಳಿದು ಬಂದಿದೆ.