ತೆಲುಗು ಚಿತ್ರರಂಗದ ನಟ, ನಿರ್ದೇಶಕ ಸೂರ್ಯ ಕಿರಣ್ ನಿಧನ

Views: 54
ಸತ್ಯಂ, ಧನ 51, ರಾಜುಭಾಯ್ ಸಿನಿಮಾ ಸೇರಿದಂತೆ ಅನೇಕ ಚಿತ್ರದಲ್ಲಿ ಕೆಲಸ ಮಾಡಿದ ಸೂರ್ಯ ಕಿರಣ್ (48) ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ.
ಜಾಂಡೀಸ್ಗೆ ತುತ್ತಾಗಿ ಕೆಲದಿನಗಳಿಂದ ಅನಾರೋಗ್ಯದಿಂದ ಸೂರ್ಯ ಕಿರಣ್ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರ ನಿಧನ ತೆಲುಗು ಚಿತ್ರರಂಗಕ್ಕೆ ತುಂಬಲಾಗಿದೆ ನಷ್ಟ ಉಂಟಾಗಿದೆ. ಸೂರ್ಯ ಕಿರಣ್ ನಿಧನಕ್ಕೆ ಆಪ್ತರು, ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಮಾಸ್ಟರ್ ಸುರೇಶ್ ಎಂಬ ಹೆಸರಿನಲ್ಲಿ 200ಕ್ಕೂ ಹೆಚ್ಚು ಸಿನಿಮಾದಲ್ಲಿ ಬಾಲನಟನಾಗಿ ಸೂರ್ಯ ಕಿರಣ್ ನಟಿಸಿದ್ದಾರೆ. ‘ಸತ್ಯಂ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಾಗ ಸೂರ್ಯ ಕಿರಣ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡರು. ತೆಲುಗಿನ ಬಿಗ್ ಬಾಸ್ ಸೀಸನ್ 4ರಲ್ಲೂ ಸೂರ್ಯ ಸ್ಪರ್ಧಿಯಾಗಿದ್ದರು. ಮೊದಲ ಎಲಿಮಿನೇಟ್ ಆಗಿ ಹೊರಬಂದಿದ್ದರು.
ಕನ್ನಡದ ರವಿಚಂದ್ರನ್, ಜಗ್ಗೇಶ್ ನಟನೆಯ ‘ರಾಮಕೃಷ್ಟ’ ಚಿತ್ರದ ನಾಯಕಿ ಕಲ್ಯಾಣಿ ಅಲಿಯಾಸ್ ಕಾವೇರಿ ಅವರನ್ನು ಸೂರ್ಯ ಕಿರಣ್ ಪ್ರೀತಿಸಿ ಮದುವೆಯಾದರು. ದಾಂಪತ್ಯದಲ್ಲಿ ಮನಸ್ತಾಪ ಉಂಟಾದ ಕಾರಣ ಡಿವೋರ್ಸ್ ಪಡೆದರು.
–