ಸಾಂಸ್ಕೃತಿಕ

ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ಬ್ಯಾನರ್ಜಿ ಸಾವು

Views: 75

ಕನ್ನಡ ಕರಾವಳಿ ಸುದ್ದಿ: ತಲ್ಸಾರಿ ಬೀಚ್‌ನಲ್ಲಿ ತಮ್ಮ ದೂರದರ್ಶನ ಕಾರ್ಯಕ್ರಮ ಭೋಲೆ ಬಾಬಾ ಪರ್ ಕರೇಗಾ ಚಿತ್ರೀಕರಣದಲ್ಲಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಚಿತ್ರೀಕರಣದ ಸಮಯದಲ್ಲಿ ಅವರು ಸಮುದ್ರಕ್ಕೆ ಬಿದ್ದು, ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ದುರದೃಷ್ಟವಶಾತ್, ರಕ್ಷಣಾ ತಂಡ ರಾಹುಲ್ ಬ್ಯಾನರ್ಜಿ ರಕ್ಷಿಸಿ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಅವರು 2000 ರಲ್ಲಿ ‘ಚಕ’ ಚಿತ್ರದೊಂದಿಗೆ ಬಂಗಾಳಿ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ‘ಚಿರ್ದಿನ್ಯಿ ತುಮಿ ಜೆ ಅಮರ್’ ಚಿತ್ರದೊಂದಿಗೆ ಜನಪ್ರಿಯತೆಯ ಉತ್ತುಂಗಕ್ಕೇರಿದರು. 2008 ರಲ್ಲಿ, ‘ಅಬರ್ ಅಸಾಬ್ ಫಿರೆ’ ಮತ್ತು ‘ಜಾಕ್‌ಪಾಟ್’ ಚಿತ್ರಗಳಲ್ಲಿ ಅವರ ಅಭಿನಯವು ಗಮನ ಸೆಳೆಯಿತು. ‘ಜುಲ್ಫಿಕರ್’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಒಡಿಶಾದ ತಲ್ಸರಿ ಬೀಚ್‌ನಲ್ಲಿ ಧಾರವಾಹಿ ಶೂಟಿಂಗ್‌ನ ಕೆಲ ಸೀನ್ ತೆಗೆಯುತ್ತಿದ್ದ ಈ ವೇಳೆ ಘಟನೆ ನಡೆದಿದೆ. ಸತತ ಸೀನ್‌ಗಳ ಚಿತ್ರೀಕರಣದ ನಡುವೆ ಸಣ್ಣ ಬ್ರೇಕ್ ನೀಡಲಾಗಿತ್ತು. ಡೈಲಾಗ್ ಡೆಲಿವರಿಗಾಗಿ ಈ ಬ್ರೇಕ್ ನೀಡಲಾಗಿತ್ತು. ಸಿಬ್ಬಂದಿಗಳು, ಕ್ಯಾಮೆರಾಮ್ಯಾನ್, ನಿರ್ದೇಶಕರು ಮುಂದಿನ ಸೀನ್ ಚಿತ್ರೀಕರಣದ ತಯಾರಿಯಲ್ಲಿದ್ದರು.

Related Articles

Back to top button
error: Content is protected !!