ಇತರೆ

ಪತಿ- ಮಕ್ಕಳನ್ನು ಬಿಟ್ಟು ವಿವಾಹಿತೆ ಪ್ರಿಯಕರನೊಂದಿಗೆ ರೈಲಿನಲ್ಲಿ ಪರಾರಿಯಾಗಲು ಯತ್ನ! ರೆಡ್ ಹ್ಯಾಂಡ್ ಸಿಕ್ಕಿ ಬಿದ್ದು ಹೈಡ್ರಾಮಾ!

Views: 74

ಕನ್ನಡ ಕರಾವಳಿ ಸುದ್ದಿ: ವಿವಾಹಿತೆ ಮಹಿಳೆಯೊಬ್ಬಳು ತನ್ನ ಪತಿ ಹಾಗೂ ಮಕ್ಕಳನ್ನು ಬಿಟ್ಟು ಪ್ರೇಮಿಯೊಂದಿಗೆ ಪರಾರಿಯಾಗಲು ಯತ್ನಿಸಿ ರೈಲಿನಲ್ಲಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದು ಹೈಡ್ರಾಮಾ  ಜಾರ್ಖಂಡ್‌ನಲ್ಲಿ ನಡೆದಿದೆ.

ಪ್ರೇಮಿಯೊಂದಿಗೆ ಹೊರಟಿದ್ದ ಈ ಮಹಿಳೆ, ದಾರಿಮಧ್ಯೆ ರೈಲಿನಲ್ಲಿ ಯಾತ್ರಿಕರ ಕೈಗೆ ಸಿಕ್ಕಿಬಿದ್ದಿದ್ದಾಳೆ. ನಂತರ ನಡೆದ ಬೆಳವಣಿಗೆಗಳು ಹೈ-ವೋಲ್ಟೆಜ್ ಡ್ರಾಮಾಕ್ಕೆ ಸಾಕ್ಷಿಯಾಗಿವೆ. ಈ ಘಟನೆಯ ವಿಡಿಯೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಮಹಿಳೆ ಈಗಾಗಲೇ ವಿವಾಹವಾಗಿದ್ದು, ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದಳು. ಆದರೆ ತನ್ನ ಪ್ರೇಮಿಯೊಂದಿಗೆ ಹೊಸ ಜೀವನ ಆರಂಭಿಸುವ ಉದ್ದೇಶದಿಂದ ಮನೆಯಿಂದ ಗುಟ್ಟಾಗಿ ಹೊರಟಿದ್ದಳು ಎನ್ನಲಾಗಿದೆ. ಇಬ್ಬರೂ ಯಾರಿಗೂ ಅನುಮಾನ ಬಾರದಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದೇವಘರ್ ಭಾಗದಿಂದ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ಕೆಲ ಯಾತ್ರಿಕರಿಗೆ ಅವರ ವರ್ತನೆ ಅನುಮಾನಾಸ್ಪದವಾಗಿ ಕಂಡಿದೆ.

ಮಹಿಳೆ ಮತ್ತು ಆಕೆಯೊಂದಿಗೆ ಇದ್ದ ವ್ಯಕ್ತಿಯನ್ನ ಯಾತ್ರಿಕರು ತಡೆದು ನಿಲ್ಲಿಸಿ ಪರಿಚಯ ಹಾಗೂ ಪ್ರಯಾಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆರಂಭದಲ್ಲಿ ಇಬ್ಬರೂ ಸ್ಪಷ್ಟ ಉತ್ತರ ನೀಡದ ಕಾರಣ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಪ್ರಯಾಣಿಕರು ಬಿಡದೆ ಪ್ರಶ್ನಿಸುತ್ತಿದ್ದಂತೆ ಮಹಿಳೆ ಗಾಬರಿಗೊಂಡಿದ್ದು, ಪರಿಸ್ಥಿತಿಯನ್ನ ನಿಭಾಯಿಸಲು ಮೊದಲಿಗೆ ತಾನು ಅವಿವಾಹಿತೆ ಎಂದು ಹೇಳಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ಯಾತ್ರಿಕರು ನಿರಂತರವಾಗಿ ಪ್ರಶ್ನಿಸಿದಾಗ ಮಹಿಳೆಯ ಮಾತಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೊನೆಗೆ ಆಕೆ ಸತ್ಯ ಒಪ್ಪಿಕೊಂಡಿದ್ದು, ತನಗೆ ಈಗಾಗಲೇ ಮದುವೆಯಾಗಿದ್ದು, ಪತಿ ಮತ್ತು ಮಕ್ಕಳನ್ನು ಬಿಟ್ಟು ಪ್ರೇಮಿಯೊಂದಿಗೆ ಹೊರಟಿರುವುದಾಗಿ ಹೇಳಿದ್ದಾಳೆಂದು ವರದಿಯಾಗಿದೆ. ಈ ಮಾತು ಕೇಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ.

ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಮಾಹಿತಿ ಈ ಘಟನೆ ಬಗ್ಗೆ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಘಟನೆಯ ಸಂಪೂರ್ಣ ಹಿನ್ನೆಲೆ, ಕುಟುಂಬದ ಪರಿಸ್ಥಿತಿ ಹಾಗೂ ಮಹಿಳೆಯ ಹೇಳಿಕೆಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

Related Articles

Back to top button
error: Content is protected !!