ಸಾಂಸ್ಕೃತಿಕ

‘ಭಾಗ್ಯಲಕ್ಷ್ಮೀ’ ಧಾರಾವಾಹಿ ನಟಿ ಪದ್ಮಜಾ ಪತಿಗೆ ಡೈವೋರ್ಸ್ ನೀಡಿ ಬಂದಿದ್ಯಾಕೆ..?

Views: 104

ಕನ್ನಡ ಕರಾವಳಿ ಸುದ್ದಿ: ʻಮೂಡಲ ಮನೆʼ ಧಾರಾವಾಹಿ, ʻಮುಂಗಾರು ಮಳೆʼ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡ ನಟಿ ಪದ್ಮಜಾ ರಾವ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಧಾರಾವಾಹಿಗಳಲ್ಲೂ ಪದ್ಮಜಾ ನಟಿಸಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಅತ್ತೆ ಪಾತ್ರ ಮಾಡುತ್ತಿದ್ದಾರೆ. ಖಡಕ್ ಅತ್ತೆಯಾಗಿ, ಮಗ ತಪ್ಪು ಮಾಡಿದಾಗ ಶಿಕ್ಷೆ ಕೊಡುವಾಗ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಜಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮೊದಲ ಮದುವೆ ಹಾಗೂ ಅದರ ವಿಚ್ಛೇದನದ ಬಗ್ಗೆ ಹೇಳಿದ್ದಾರೆ ಪದ್ಮಾಜಾ.

ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪದ್ಮಜಾ ಹೇಳಿದ್ದಾರೆ. ‘ನಾನು ಸಣ್ಣ ವಯಸ್ಸಿಗೆ ಮದುವೆ ಆದೆ. ಖುಷಿಯಿಂದಲೇ ಮದುವೆ ಆದೆ. ಧಾರಾವಾಹಿ ಮಾಡಲು ಅಮ್ಮ ಅವಕಾಶ ಕೊಡ್ತಾ ಇರಲಿಲ್ಲ. ಮದುವೆ ಆದ ಬಳಿಕ ನಟಿಸಬಹುದು ಎಂದುಕೊಂಡಿದ್ದೆ. ಆದರೆ, ಹಾಗಾಗಿಲ್ಲ’ ಎಂದರು ಪದ್ಮಜಾ. ತಾಯಿ ಹಾಕುತ್ತಿದ್ದ ನಿರ್ಬಂಧಗಳಿಂದ ಪದ್ಮಜಾ ಬೇಸರಗೊಂಡಿದ್ದರು. ಪತಿ ಆದರೂ ನಟಿಸೋಕೆ ಅವಕಾಶ ಕೊಡಬಹುದು ಎಂದುಕೊಂಡಿದ್ದರು.

‘ಮೊದಲ ಮದುವೆ ಯಶಸ್ಸು ಕಾಣಲಿಲ್ಲ. ಮೊದಲ ಮದುವೆಯಿಂದ ಸಂಜೀವ್ ಜನಿಸಿದ. ಆ ಬಳಿಕ ನಟಿಯಾಗಲು ಪ್ರಯತ್ನಿಸಿದೆ. ನಾನು ಆ ನೋವಿನಿಂದ ಹೊರ ಬಂದಿದ್ದೇನೆ. ನನ್ನ ಮಗ ಸಂಜೀವ್ ಅನ್ನು ನೋಡಿದರೆ ಎಲ್ಲಾ ನೋವು ಮಾಯ ಆಗುತ್ತದೆ. ಅವನಲ್ಲಿ ಆ ಶಕ್ತಿ ಇದೆ’ ಎಂದಿದ್ದಾರೆ ಪದ್ಮಜಾ. ನಟನೆಯಲ್ಲಿ ನಟಿಸಲು ಅವಕಾಶ ಸಿಗದಿದ್ದಾಗ ಅವರು ಪತಿಗೆ ವಿಚ್ಛೇದನ ನೀಡಿ ಹೊರ ಬಂದರು.

ನಂತರ ಪದ್ಮಜಾ ರಾವ್ ಅವರು ನಿಧಾನವಾಗಿ ಕಿರುತೆರೆಯಲ್ಲಿ ಅವಕಾಶ ಪಡೆಯುತ್ತಾ ಬಂದರು. ದೂರದರ್ಶನದಲ್ಲಿ ಪ್ರೋಗ್ರಾಂಗಳನ್ನು ಕೂಡ ನಿರ್ಮಾಣ ಮಾಡಿದರು ಪದ್ಮಜಾ ರಾವ್. ನಂತರ ಅವರಿಗೆ ನಟನೆಯಲ್ಲಿ ಹಲವು ಅವಕಾಶಗಳನ್ನು ಪಡೆದರು. ‘ಮೂಡಲ ಮನೆ’ ಅವರ ಬದುಕು ಬದಲಿಸಿತು.

ರಿಲೇಶನ್ಶಿಪ್ ಬಗ್ಗೆ ಪದ್ಮಜಾ ರಾವ್ ಸಲಹೆ ನೀಡಿದ್ದಾರೆ. ‘ಸಂಬಂಧಗಳಲ್ಲಿ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಮಲಗುವುದಕ್ಕೂ ಮೊದಲು ಯೋಚಿಸಿ. ಲಿವಿನ್ ಅಲ್ಲಾದರೂ ಇರಿ ಅಥವಾ ಮದುವೆ ಆಗಿ ಅದು ನಿಮಗೆ ಬಿಟ್ಟಿದ್ದು. ಆದರೆ, ಅದಕ್ಕೆ ಹೋಗೋದಕ್ಕೂ ಮೊದಲು ಅವರ ಜೊತೆ ಸುತ್ತಾಡಿ, ಅವರು ಹೇಗೆ ಎಂಬುದನ್ನು ತಿಳಿದುಕೊಳ್ಳಿ’ ಎಂದು ಪದ್ಮಜಾ ರಾವ್ ಹೇಳಿದ್ದಾರೆ.

ಒಂದು ಹಂತದಲ್ಲಿ, ನಾನು ನಟಿ ಆಗ್ತೀನಿ ಆಗ್ತೀನಿ ಅಂತ ಕೂತುಕೊಂಡರೆ ನಡೆಯಲ್ಲ. ಮಗುವನ್ನ ಸ್ಕೂಲಿಗೆ ಕಳಿಸಬೇಕು, ಫೀಸ್‌ ಕಟ್ಬೇಕು. ನಾನು ಗಟ್ಟಿ ಮನಸ್ಸು ಮಾಡಿ ರಿಸೆಪ್ಷನಿಸ್ಟ್‌ ಆಗಿ ಕೆಲಸಕ್ಕೆ ಸೇರಿಬಿಟ್ಟಿದ್ದೆ. ಆದರೂ, ಈ ಲೈನ್‌ಗೆ ಸೇರೋದಕ್ಕೆ ಕನೆಕ್ಷನ್‌ ಹುಡುಕುತ್ತಿದ್ದೆ. ಆಗ ಟಿ.ಎನ್‌ ನರಸಿಂಹನ್‌ ಅವರ ಭೇಟಿ ಆಯ್ತು. ಅವರು ಇವತ್ತು ಇಲ್ಲ. ಅವರು ಕೂಡ ಮಾಲ್ಗುಡಿ ಡೇಸ್‌ ಸ್ಕ್ರಿಪ್ಟ್‌ ಮಾಡಿದ್ದರು. ಇವರಿಂದ ನಾಗಾಭರಣ ಅವರ ಪರಿಚಯ ಆಯ್ತು, ʻಓ ನನ್ನ ಬೆಳಕೇʼ ಧಾರಾವಾಹಿಯಲ್ಲಿ ಚಾನ್ಸ್‌ ಕೊಟ್ಟರು. ಒಂದಷ್ಟು ಧಾರಾವಾಹಿಗಳನ್ನ ಮಾಡಿದೆ. ನಂತರ ʻಮೂಡಲ ಮನೆʼ ಸಿಕ್ತು. ಅದಾದ ಮೇಲೆ ಹಠವಾದಿ, ಮುಂಗಾರು ಮಳೆ, ಗಾಳಿಪಟ, ಉಗ್ರಂ ಮತ್ತು ಇವತ್ತು ಭಾಗ್ಯಲಕ್ಷ್ಮೀ ಎಲ್ಲವೂ ನನಗೆ ತುಂಬಾ ಹೆಸರು ತಂದುಕೊಟ್ಟಿದೆ. ನನ್ನ ಕೆಲಸವನ್ನ ಜನ ಇಷ್ಟ ಪಟ್ಟಿದ್ದಾರೆ” ಎಂದಿದ್ದಾರೆ ಪದ್ಮಜಾ ರಾವ್

Related Articles

Back to top button
error: Content is protected !!