ತನ್ನ ಹೆಂಡತಿಯನ್ನೇ ಆಕೆಯ ಪ್ರೇಮಿಗೆ ಧಾರೆ ಎರೆದು ಕೊಟ್ಟ ಪತಿರಾಯ!

Views: 216
ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಆಕೆಯ ಪ್ರೇಮಿಗೆ ಧಾರೆ ಎರೆದು ಕೊಟ್ಟ ಅಚ್ಚರಿಯ ಘಟನೆ ನಡೆದಿದೆ.
ಉತ್ತರಪ್ರದೇಶದ ಸಂತಕಬೀರ್ನಗರ ಜಿಲ್ಲೆಯಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. ಪತಿಯೇ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಕಾನೂನಾತ್ಮಕವಾಗಿ ವಿವಾಹ ಮಾಡಿಸಿದ್ದಾನೆ. ಕೋರ್ಟ್ನಲ್ಲಿ ಆತನೇ ನೋಟರಿ ಮಾಡಿಸಿ, ದೇವಸ್ಥಾನದಲ್ಲಿ ತಾನೇ ಖುದ್ದಾಗಿ ನಿಂತು ತಾಳಿ ಕಟ್ಟಿಸಿದ್ದಾನೆ.
ದಂಪತಿಗೆ ಮೊದಲು ಇಬ್ಬರು ಮಕ್ಕಳಿದ್ದು, ಅವರನ್ನು ತಾನೇ ಫೋಷಿಸುವುದಾಗಿ ಆತ ಹೇಳಿದ್ದಾನೆ. ತನ್ನ ಪತ್ನಿಯು ಆಕೆಯ ಪ್ರಿಯಕರನ ಜೊತೆ ಸುಖವಾಗಿರಲಿ ಎಂದು ಹಾರೈಸಿದ್ದಾನೆ.
2017 ರಲ್ಲಿ ವಿವಾಹವಾಗಿತ್ತು. ಸುಖಮಯವಾಗಿದ್ದ 8 ವರ್ಷಗಳ ದಾಂಪತ್ಯದಲ್ಲಿ ದಂಪತಿಗೆ 7 ವರ್ಷದ ಓರ್ವ ಪುತ್ರ, 2 ವರ್ಷದ ಪುತ್ರಿ ಇದ್ದಾರೆ. ಕುಟುಂಬ ನಿರ್ವಹಣೆಗಾಗಿ ಪತಿಯು ಆಗಾಗ್ಗೆ ಮನೆಯಿಂದ ದೂರ ಇರುತ್ತಿದ್ದ. ಈ ವೇಳೆ ಅದೇ ಗ್ರಾಮದ ಯುವಕನ ಜೊತೆ ಮಹಿಳೆಯು ಸಂಪರ್ಕ ಬೆಳೆಸಿಕೊಂಡಿದ್ದಾಳೆ.
ಈ ಬಗ್ಗೆ ತಿಳಿದ ವ್ಯಕ್ತಿಯು ಅವರಿಬ್ಬರಿಗೆ ವಿವಾಹ ಮಾಡಿಸುವ ಅಚ್ಚರಿಯ ನಿರ್ಧಾರಕ್ಕೆ ಬಂದಿದ್ದಾನೆ. ಇತ್ತೀಚೆಗೆ ಪತ್ನಿ ಮತ್ತು ಆಕೆಯ ಪ್ರಿಯಕರನ ಸಮೇತ ಸ್ಥಳೀಯ ನ್ಯಾಯಾಲಯಕ್ಕೆ ತೆರಳಿ ಅವರಿಬ್ಬರ ವಿವಾಹದ ಅಫಿಡವಿಟ್ ಮಾಡಿಸಿದ್ದಾನೆ. ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತನ್ನ ಎದುರಿನಲ್ಲೇ ಪತ್ನಿಗೆ ಪ್ರಿಯಕರನಿಂದ ತಾಳಿ ಕಟ್ಟಿಸಿದ್ದಾನೆ. ಇನ್ನು ಮುಂದೆ ಆಕೆಯು ತನ್ನ ಪ್ರಿಯಕರನ ಜೊತೆಗೆ ಇರಲಿ. ಇಬ್ಬರು ಮಕ್ಕಳ ಜೊತೆ ತಾನು ಇರುವುದಾಗಿ ತಿಳಿಸಿದ್ದಾನೆ.