ತಂದೆ ತಾಯಿಯ ಯೋಗಕ್ಷೇಮ ಮಕ್ಕಳ ಕರ್ತವ್ಯ:ಹೈಕೋರ್ಟ್ ನಿರ್ದೇಶನದ ತೀರ್ಪು

Views: 1
ವೃದ್ದಾಪ್ಯದಲ್ಲಿ ತಂದೆ ತಾಯಿಯವರನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತವೇ ಇಲ್ಲವೆಂದು ಬೃಹ್ಮಾಂಡ ಪುರಾಣದಲ್ಲಿ ಹೇಳಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ದೇವರನ್ನು ಆರಾಧಿಸುವ ಮೊದಲು ತಂದೆ, ತಾಯಿ,ಗುರು, ಅತಿಥಿಗಳನ್ನು ಗೌರವಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ತಮ್ಮ ಪೋಷಕರನ್ನು ಸಲಹಲು ಮಕ್ಕಳು ವಿಫಲರಾಗುತ್ತಿದ್ದಾರೆ. ಇಂತಹ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ವೃದ್ದಾಪ್ಯದಲ್ಲಿ ತಂದೆ ತಾಯಿಯ ಯೋಗಕ್ಷೇಮ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ತೈತ್ತರೀಯ ಉಪನಿಷತ್ತಿನಲ್ಲಿ ಉಲ್ಲೇಖವಾಗಿರುವಂತೆ ಶಿಕ್ಷಣ ಕಲಿಸಿದ ಗುರು ತನ್ನ ಶಿಷ್ಯನನ್ನು ಬೀಳ್ಕೊಡುವಾಗ ತಾಯಿ, ತಂದೆ,ಗುರು,ಅತಿಥಿಗಳನ್ನು ದೇವರೆಂದು ಭಾವಿಸುವಂತೆ ಉಪದೇಶ ನೀಡುತ್ತದೆ.
ಇತ್ತೀಚೆಗೆ ನಡೆದ ಘಟನೆಯಲ್ಲಿ ತಾಯಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲವೆಂದು ಪುತ್ರರಿಗೆ ಉಪನಿಷತ್ ಪುರಾಣಗಳ ಪಾಠ ಹೇಳಿ ನಿರ್ದೇಶನ ನೀಡಿರುವ ಹೈಕೋರ್ಟ್ ತಾಯಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಾವತಿಸುವಂತೆ ಪುತ್ರರಿಗೆ ನಿರ್ದೇಶನ ನೀಡಿದೆ.
84 ವರ್ಷದ ವೆಂಕಮ್ಮ ಅವರಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಗಳು ನೀಡಿದ ಆದೇಶ ಪ್ರಶ್ನಿಸಿ. ಪುತ್ರರು ಸಲ್ಲಿಸಿದ ಅರ್ಜಿ ವಚಾಗೊಳಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿಂದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಪುರಾಣ ಉಪನಿಷತ್ತುಗಳನ್ನು ಉಲ್ಲೇಖಿಸಿ, ತಾಯಿಯನ್ನು ಸಲಹುವ ಕರ್ತವ್ಯ ಮಕ್ಕಳದೆಂದು ತೀರ್ಪು ನೀಡಿದ್ದಾರೆ.
‘ರಕ್ಷತಿ ಸಮೀರೇ ಪುತ್ರಂ’ ಎಂದು ಸ್ಮೃತಿಕಾರರು ಹೇಳಿದ್ದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.