ಆರ್ಥಿಕ
ಜನರ ಹೆಸರಲ್ಲಿ 50 ಲಕ್ಷರೂ.ಸಾಲ ಪಡೆದು ಹಣದ ಸಮೇತ ದಂಪತಿ ಪರಾರಿ!

Views: 97
ಕನ್ನಡ ಕರಾವಳಿ ಸುದ್ದಿ: ಜನರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಸಾಲ ಪಡೆದು ಹಣದ ಸಮೇತ ದಂಪತಿ ಪರಾರಿಯಾದ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಕಂಪೆನಿಯವರು ಹಣ ಕಟ್ಟುವಂತೆ ಜನರಿಗೆ ನೋಟಿಸ್ ನೀಡಿದ್ದು ಇದೀಗ ಜನರು ಕಂಗಾಲಾಗಿದ್ದಾರೆ.
ದೊಡ್ಡಹೊಸಹಳ್ಳಿ ಗ್ರಾಮದ ಪ್ರತಾಪ್ ಮತ್ತು ರತ್ನಮ್ಮ ದಂಪತಿ ಸುಮಾರು 35 ಗ್ರಾಮಸ್ಥರ ಆಧಾರ್ ಕಾರ್ಡ್, ಇತರ ದಾಖಲೆಗಳನ್ನು ಪಡೆದು ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ 45ರಿಂದ 50 ಲಕ್ಷ ರೂ. ವರೆಗೆ ಸಾಲ ಮಂಜೂರು ಮಾಡಿಸಿದ್ದರು. ಜನರಿಗೆ ಮಂಜೂರಾದ ಹಣವನ್ನು ಪಡೆದು, ನಾವೇ ಸಾಲದ ಕಂತು ಕಟ್ಟಿಕೊಂಡು ಹೋಗುತ್ತೇವೆ ಎಂದು ನಂಬಿಸಿ ಮೋಸ ಮಾಡಿ ಹಣದ ಸಮೇತ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು ಇದುವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.