ಧಾರ್ಮಿಕ
ಚಿಕಿತ್ಸೆಗೆ ಬಂದ ನಕಲಿ ಬಾಬಾ ಯುವತಿ ಜೊತೆ ಅಸಭ್ಯ ವರ್ತನೆ, ಭಾರೀ ವೈರಲ್ !

Views: 263
ನಕಲಿ ಬಾಬಾನೊಬ್ಬ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಹೊಟ್ಟೆನೋವಿಗೆಂದು ಪೋಷಕರ ಜೊತೆ ಬಂದಿದ್ದ ಯುವತಿಯ ಮೈಯನ್ನು ಮುಟ್ಟಿ ಆಕೆ ತಂದೆ ತಾಯಿ ಎದುರೇ ನಕಲಿ ಬಾಬಾ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯ ಎದೆ, ಹೊಟ್ಟೆಯನ್ನು ಮುಟ್ಟಿ ನಕಲಿ ಬಾಬಾ ವಿಕೃತಿ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಕಲಿ ಬಾಬಾಗಳು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿರುವ ಸುದ್ದಿಗಳು ಬೆಳಕಿಗೆ ಬರುತ್ತಿದ್ದರೂ ಜನರಿಗಂತೂ ಬುದ್ದಿ ಬರುತ್ತಲೇ ಇಲ್ಲ.
ಇನ್ನು ಯುವತಿ ಬಾಬಾನ ವರ್ತನೆಗೆ ಬೇಸತ್ತು ತನ್ನನ್ನು ಮುಟ್ಟದಂತೆ ಎಷ್ಟೇ ತಡೆದರೂ ಈ ಬಾಬಾ ಮಾತ್ರ ಮತ್ತೆ ಮತ್ತೆ ಅದನೇ ಮಾಡುತ್ತಾನೆ. ಅದೂ ಅಲ್ಲದೇ ಆಕೆಯ ತಂದೆ ತಾಯಿ ಕೂಡ ಆಕೆಯನ್ನು ಬಾಬಾನ ಚಿಕಿತ್ಸೆಗೆ ಸಹಕರಿಸುವಂತೆ ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬುದಾಗಿದೆ.