ಜನಮನ
ಚಲಿಸುತ್ತಿದ್ದ ಬಸ್ ಬೆಂಕಿಗೆ ಅನಾಹುತಿ 26 ಮಂದಿ ಪ್ರಯಾಣಿಕರು ಸಜೀವ ದಹನ

Views: 0
ಚಲಿಸುತ್ತಿದ್ದ ಬಸ್ ಇದ್ದಕ್ಕಿದ್ದಂತೆ ಬೆಂಕಿಗೆ ಹೊತ್ತಿಕೊಂಡು ಪರಿಣಾಮ 26 ಮಂದಿ ಸಜೀವ ದಹನವಾಗಿ ಏಳು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಪ್ರಯಾಣಿಕರ ಬಸ್ ನಾಗ್ಪುರದಿಂದ ಪುಣೆಗೆ ಹೋಗುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ಸಂಭವಿಸಿದೆ.
ಬಸ್ ವಿಭಜಕ್ಕೆ ಡಿಕ್ಕಿ ಹೊಡೆದ ವೇಳೆ ಬಸ್ ಬೆಂಕಿ ಹತ್ತಿಕೊಂಡಿದೆ ನಂತರ ಪ್ರಯಾಣಿಕರು ಹೊರಬರಲಾಗದೆ 25 ಮಂದಿ ಸಜೀವ ದಹನರಾಗಿದ್ದಾರೆ.
ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿ ಕಾರ್ಯಾಚರಣೆ ನಡೆಸಲಾಯಿತು.
ಘಟನೆ ವೇಳೆ 33 ಜನ ಪ್ರಯಾಣಿಕರು ಇದ್ದರು ಚಾಲಕ ಮತ್ತು ಸಹಾಯಕರು ಪಾರಾಗಿದ್ದಾರೆ. ಎಂದು ತಿಳಿದು ಬಂದಿದೆ.