ಇತರೆ

ಸಾಮಾಜಿಕ ಮಾಧ್ಯಮದಲ್ಲಿ ಪತಿ ಶ್ರೀಕಾಂತ್‌ ಕಶ್ಯಪ್‌ ಬಗ್ಗೆ  ಚೈತ್ರಾ ಕುಂದಾಪುರ ಹೇಳಿದ್ದೇನು?

Views: 71

ಕನ್ನಡ ಕರಾವಳಿ ಸುದ್ದಿ ಚೈತ್ರಾ ಕುಂದಾಪುರ ಪತಿ ಶ್ರೀಕಾಂತ್‌ ಕಶ್ಯಪ್‌ ಅವರ ಹುಟ್ಟುಹಬ್ಬ. ಹೀಗಾಗಿ ಚೈತ್ರಾ ಕುಂದಾಪುರ ಅವರು ಸಾಮಾಜಿಕ ಮಾಧ್ಯಮದಲ್ಲಿ ಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. ವಿಡಿಯೊದಲ್ಲಿ ಸುಂದರ ಫೋಟೊಗಳನ್ನು ಸಂಯೋಜಿಸಿ ಹಂಚಿಕೊಂಡಿದ್ದಾರೆ. 10 ವರ್ಷಗಳ ಪ್ರೀತಿ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ.

‘ಹೀಗೆ ಪ್ರಾರಂಭವಾದ ಸ್ನೇಹ, ಮಾತೇ ಆಡದೆ ಭರವಸೆ ಹುಟ್ಟಿಸಿತು. ಸಿದ್ಧಾಂತಕ್ಕಾಗಿ ಬಡಿದಾಡುವ ಕಿಚ್ಚು ಕಲಿಸಿತು. ಕೆಲಸ- ಕಲಿಕೆ ಜೊತೆಗೆ ಸಾಗಿತು. ಹೊಸ ಹೆಜ್ಜೆಯ ನಿಡುವ ಧೈರ್ಯ ತುಂಬಿತು. ಯೋಚನೆ ನಿರ್ಧಾರ ಒಂದೇ ಆಯಿತು. ಹೋರಾಟದ ಹಾದಿಗೆ ನಮ್ಮನ್ನು ಎಳೆದು ತಂದಿತು. ಕರ್ನಾಟಕದ ಮೂಲೆ ಮೂಲೆಗೂ ಜೊತೆಯಾಗಿ ಸಾಗುವ ಶಕ್ತಿ ನೀಡಿತು. ತಡೆಯಲು ಬಂದ ಶಕ್ತಿಗಳೆಷ್ಟೋ, ಮುರಿಯಲು ನಡೆದ ಪ್ರಯತ್ನ ಗಳೆಷ್ಟೋ ಲೆಕ್ಕವಿಲ್ಲ. ನಾವು ಸಾಗಿದೆವು ಇನ್ನಷ್ಟು ಗಟ್ಟಿಯಾದ ಭರವಸೆಯ ತಳಹದಿಯ ಮೇಲೆ

ಸ್ನೇಹಿತರು, ಹಿತೈಷಿಗಳೆಂಬ ಮುಖವಾಡ ಹೊತ್ತು ಬಂದವರು ದೂರವಾದರು. ಗುರು ದೇವರೆಡೆಗಿನ ನಂಬಿಕೆ, ಭಗವಂತನೆಡೆಗಿನ ಶರಣಾಗತಿ ನಮ್ಮನ್ನು ಕಾಯುತ್ತಲೇ ಬಂದಿತು. ಅಪವಾದ, ಅಪಮಾನಗಳ ಮೆಟ್ಟಿ ನಿಲ್ಲಲು ಶಕ್ತಿಯಾದವನಿಗೆ. ನನ್ನೊಳಗಿನ ಶಕ್ತಿ, ನನ್ನ ಕನಸುಗಳ ಒಡೆಯನಿಗೆ, ಕನಸು ಕಾಣುವ ಹೆಣ್ಣುಮಕ್ಕಳಿಗೆಲ್ಲ ನಾನು ಗಂಡಸು ಎನ್ನುವ ಅಹಮಿಕೆ ಇಲ್ಲದ ನಿನ್ನಂತಹ ಜೊತೆಗಾರ ಸಿಗಲಿ

ದೇವರಂತಹ ಗಂಡನ ಕೊಡು ಎಂದು ಯಾವತ್ತೂ ಕೇಳಿಲ್ಲ, ದೇವರೇ ನನ್ನ ಜೊತೆಗಿರುವ ಖಾತರಿ ನನಗಿದೆಯಲ್ಲ. ಹುಟ್ಟುಹಬ್ಬದ ಶುಭಾಶಯಗಳು ಮಗಾ. ಥ್ಯಾಂಕ್ಸು ನನ್ನ ಬದುಕನ್ನು ಆವರಿಸಿಕೊಂಡಿದ್ದಕ್ಕೆ. ಥ್ಯಾಂಕ್ಸು ನನ್ನ ಬದುಕು ನೀನೇ ಆಗಿದ್ದಕ್ಕೆ. ಭಗವಂತ ನಿನ್ನೆಲ್ಲ ಆಯುಷ್ಯ, ಸಂಭ್ರಮ, ಯಶಸ್ಸನ್ನು ನನ್ನೊಂದಿಗೆ ಕೊಟ್ಟು ಕಾಪಾಡಲಿ’ ಎಂದು ಬರೆದುಕೊಂಡಿದ್ದಾರೆ.

Related Articles

Back to top button
error: Content is protected !!