ಕನ್ನಡ ಕರಾವಳಿ ಸುದ್ದಿ: ಶ್ರೀಮತಿ ಜ್ಯೋತಿ ಮತ್ತು ಶ್ರೀ ಪ್ರಕಾಶ್ ಶೆಟ್ಟಿಗಾರ್, ಸಾಲಿಗ್ರಾಮ ರವರ ಪುತ್ರ ಪ್ರಜ್ವಲ್ ಶೆಟ್ಟಿಗಾರ್ ರವರು ಭಾರತದ ಪ್ರತಿಷ್ಠಿತ ಪತ್ರಿಕೆಯಾದ ದಿ ಟೈಮ್ಸ್ ಆಫ್ ಇಂಡಿಯಾದ ಎಕಾನಮಿ ಟೈಮ್ಸ್ HR ವರ್ಲ್ಡ್- ಎಮರ್ಜಿಂಗ್ ಲೀಡರ್ 2026 ಪ್ರಶಸ್ತಿಯನ್ನು 18 ಫೆಬ್ರವರಿ ರಂದು ದೆಹಲಿಯ ಲೀಲಾ ಪ್ಯಾಲೇಸ್ನಲ್ಲಿ ಪಡೆದಿರುತ್ತಾರೆ.
ಇದು ದೇಶದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, 3 ಸುತ್ತಿನ ಪರೀಕ್ಷೆಯಲ್ಲಿ ಆಯ್ಕೆಯಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಪ್ರಸ್ತುತ ಇವರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ HR ಮ್ಯಾನೇಜರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ.