ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಕಿಂಡರ್ ಗಾರ್ಟನ್ ಪದವಿ ಪ್ರದಾನ ಸಮಾರಂಭ
Views: 2
ಕನ್ನಡ ಕರಾವಳಿ ಸುದ್ದಿ: ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಕ್ಕಳು ಗುಣದಲ್ಲಿ ಎತ್ತರ ಬೆಳೆಯುತ್ತಾರೆ, ಮಕ್ಕಳನ್ನು ಅವರ ಪಾಡಿಗೆ ಬಿಡುತ್ತೇವೆ ಎಂಬ ಅಹಂಕಾರ ಬಿಟ್ಟು ಕಲಿಕೆಗೆ ಪೂರಕವಾಗಿರುವ ಆಡಿಯೋ, ಪುಸ್ತಕ ನೀಡುವುದರ ಮೂಲಕ ಮಗು ಸೃಜನಶೀಲತೆ ಕಲ್ಪಿಸಿಕೊಳ್ಳುತ್ತಾರೆ, ಪೋಷಕರು ಸಹ ಮಕ್ಕಳ ಪ್ರತಿಭೆಯನ್ನು ಪ್ರೇರೇಪಿಸಿದಾಗ ಅವರು ಅದ್ಭುತವಾಗಿ ಬೆಳೆಯುತ್ತಾರೆ ಎಂದು ಚಿತ್ರನಟಿ ಮತ್ತು ನೃತ್ಯನಿಕೇತನ ಕೊಡವೂರು ಇದರ ಸಹ ನಿರ್ದೇಶಕಿ ಮಾನಸಿ ಸುಧೀರ್ ಅವರು ಹೇಳಿದರು.
ಅವರು ಫೆ.19ರಂದು ಯಡಾಡಿ-ಮತ್ಯಾಡಿ ಇಲ್ಲಿ ವಿದ್ಯಾರಣ್ಯ ಇಂಗ್ಲಿಷ್ ಮಾಧ್ಯಮ ಶಾಲೆ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆದ ಕಿಂಡರ್‌ಗಾರ್ಟನ್ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಲಿ-ಕಲಿ ಶಿಕ್ಷಣ ಪದ್ಧತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳನ್ನು ತಯಾರು ಮಾಡುವಲ್ಲಿ ನಿಮ್ಮ ಪ್ರೋತ್ಸಾಹದೊಂದಿಗೆ ಕಲಾವಿದರನ್ನು ಕರೆಸಿ ವಿವಿಧ ಕ್ಷೇತ್ರದ ಪರಿಣಿತರನ್ನು, ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೀಡಿದಾಗ ಮಗುವಿನ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ಆಧುನಿಕ ಶಿಕ್ಷಣ ಪದ್ಧತಿಯ ತಂತ್ರಜ್ಞಾನ ಆಧಾರಿತ ವಿದ್ಯಾರ್ಥಿ ಕೇಂದ್ರಿತ ಮತ್ತು ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಬೆಳೆಸುವಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪುಟಾಣಿ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
ವಿದ್ಯಾರಣ್ಯ ಇಂಗ್ಲಿಷ್ ಮಾಧ್ಯಮಶಾಲೆ ಇದರ ಮುಖ್ಯೋಪಾಧ್ಯಾಯ ಪ್ರದೀಪ್ ಸ್ವಾಗತಿಸಿ, ಶಿಕ್ಷಕಿ ದೀಕ್ಷಾ ಅನಿಲ್ ನಿರೂಪಿಸಿದರು.ಶಿಕ್ಷಕಿ ಪ್ರಿಯಾಂಕಾ ಭಟ್ ವಂದಿಸಿದರು. ಅರ್ಚನಾ ಮತ್ತು ಅರುಣಾ ಪ್ರಭು ಪದವಿ ಪ್ರದಾನ ಪಟ್ಟಿ ವಾಚಿಸಿದರು.












