ಇತರೆ

ಟಿವಿ ವಾಲ್ಯೂಮ್ ವಿಚಾರಕ್ಕೆ ಶುರುವಾದ ಗಲಾಟೆ; ಗಂಡನ ಕೊಲೆಯಲ್ಲಿ ಅಂತ್ಯ!

Views: 70

ಗುಂಟೂರು: ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯ ಕಂಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಇಂತಹದೇ ಒಂದು ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಟಿವಿ ಸೌಂಡ್ ವಿಚಾರಕ್ಕೆ ದಂಪತಿ ನಡುವೆ ಶುರುವಾದ ಗಲಾಟೆ, ಗಂಡನ ಕೊಲೆಯಲ್ಲಿ ಅಂತ್ಯವಾಗಿದೆ. ಶೇಖ್ ಅಹ್ಮದ್ (27) ಕೊಲೆಯಾದ ವ್ಯಕ್ತಿ.

ಎಸಿ ಮೆಕ್ಯಾನಿಕ್ ಆಗಿದ್ದ ಅಹ್ಮದ್, ಮಂಗಳಗಿರಿಯ ಟಿಡೋ ಹೌಸಿಂಗ್‌ ಕಾಲೋನಿಯಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಟಿವಿ ವಾಲ್ಯೂಮ್ ಕಡಿಮೆ ಮಾಡುವಂತೆ ಅಹ್ಮದ್ ತನ್ನ ಪತ್ನಿಗೆ ಹೇಳಿದ್ದಾರೆ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದಾಗ ಪತ್ನಿ ಚಾಕುವಿನಿಂದ ಅಹ್ಮದ್‌ಗೆ ಇರಿದಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Related Articles

Back to top button
error: Content is protected !!