ಚಂದ್ರಯಾನ- 3 ಜುಲೈ 14ರಂದು ಬಾಹ್ಯಾಕಾಶ ರಾಕೆಟ್ ಉಡಾವಣೆ

Views: 1
ಚಂದ್ರಯಾನ- 3 ಜುಲೈ 14ರಂದು ಬಾಹ್ಯಾಕಾಶ ರಾಕೆಟ್ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ- 3 ಜುಲೈ 14ರಂದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವನ್ನು ಉಡಾವಣೆಯಾಗಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶವೇ ಎದುರು ನೋಡುತ್ತದೆ.
ಭಾರತದ ಮೂರನೇ ಚಂದ್ರಯಾನ- 3 ಶುಕ್ರವಾರ ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲಾ ಅಂಶಗಳ ಭಾರತದ ಚಂದ್ರಯಾನ ಕಾರ್ಯಾಚರಣೆಗೆ ಕೂಡಿ ಬಂದರೆ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ ಎಂದು ತಿಳಿದುಬಂದಿದೆ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲು ಭಾರತದ ಇದು ಎರಡನೆಯ ಪ್ರಯತ್ನವಾಗಿದೆ. ಚಂದ್ರಯಾನ- 2 ಮಿಷನ್ ಕಾರ್ಯಾಚರಣೆ ಸಣ್ಣ ಕಾರಣಗಳಿಂದ ಅಂತಿಮ ಹಂತದಲ್ಲಿ ವಿಫಲವಾಗಿದೆ. ಈ ಹಿಂದೆ ಗುರುತಿಸಲಾದ ಸಮಸ್ಯೆಗಳನ್ನು ಸರಿ ಮಾಡಲಾಗಿದೆ. ಇದರಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಲಾಗಿದೆ.
ಬಾಹ್ಯಾಕಾಶ ನೌಕೆಯು ಹೆಚ್ಚಿನ ವೇಗದಲ್ಲಿ ಚಂದ್ರನ ಮೇಲೆ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ.ಸುಧಾರಿತ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಇದರಲ್ಲಿ ನಡೆಯಲಿದೆ.ಹೆಚ್ಚುವರಿ ಸಂವೇದಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಬಲಪಡಿಸಲಾಗಿದೆ. ಚಂದ್ರಯಾನದಲ್ಲಿ ಯಾವುದೇ ವೈಫಲ್ಯ ಕಂಡುಬಂದರೂ ತ್ವರಿತವಾಗಿ ಪರಿಹರಿಸಲು ಸಿದ್ಧರಿದ್ದೇವೆ.
ಚಂದ್ರನನ್ನು ಆವರಿಸುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನ ಪದಾರ್ಥದ ಅಧ್ಯಯನ ನಡೆಸುವ ಲೂಗಾರ್ ರಿಗೊಲಿತ್ ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂಗಾರ್ ಸೆಸಿಮಿಸಿಟಿ ಹೊರ ಲವಣದಲಿನ ಪ್ಲಾಸ್ಮ ಬಾಹ್ಯಾಕಾಶೆ ನೌಕೆ ಇಳಿದ ಪ್ರದೇಶದಲ್ಲಿನ ದಾತು ರೂಪದ ಸಂಯೋಜನೆ ಮುಂತಾದುಗಳನ್ನು ಅಧ್ಯಯನ ಮಾಡಲಾಗುವುದು ಎಂದು ಸೋಮನಾಥ ತಿಳಿಸಿದ್ದಾರೆ.