ಗಂಡನ ಜೊತೆ 27 ದಿನ ಸಂಸಾರ ಮಾಡಿದ ಮಾಯಾ ಸುಂದರಿ ಮಸಲತ್ತಿನ ಕಹಾನಿ!

Views: 205
ಕನ್ನಡ ಕರಾವಳಿ ಸುದ್ದಿ: ಚೆಲುವೆ ಅಂದ ಚೆಂದವನ್ನು ನೋಡಿ ಮರುಳಾಗಿಬಿಟ್ರೆ ಪಂಗನಾಮ ಗ್ಯಾರಂಟಿ ಅಂತಾನೇ ಲೆಕ್ಕ. ಯಾಕಂದ್ರೆ ಈ ಚೆಲುವೆ ಅಂದವನ್ನೇ ನಂಬಿ ಇಲ್ಲೊಬ್ಬ ಆಸಾಮಿ ಮೋಸ ಹೋಗಿದ್ದಾನೆ. ಅಷ್ಟಕ್ಕೂ ಈ ಸುಂದರಿ ಹೆಸರು ಫರ್ಹಾನ್ ಬೇಗಂ ಅಂತ. 2014 ರಲ್ಲಿ ಫರ್ಹಾನ್ಳನ್ನ ತುಮಕೂರಿನ ಇದ್ರೀಸ್ ಮದುವೆಯಾಗಿದ್ದಾರೆ. ಬ್ರೋಕರ್ ಮೂಲಕ ಪರಿಚಯವಾಗಿ ಫರ್ಹಾನ್ಖಾನ್ಳನ್ನ ಇದ್ರಿಸ್ ಸತಿಯಾಗಿ ಸ್ವೀಕರಿಸಿದ್ರು. ಎಲ್ಲಾ ಖರ್ಚನ್ನ ತಾನೊಬ್ಬನೇ ನೋಡ್ಕೊಂಡು ಇದ್ರೀಸ್ ಫರ್ಹಾನಳನ್ನ ಮದುವೆಯಾಗಿದ್ದ. ಆದರೆ ಮದುವೆಯಾದ ಕೆಲವೇ ದಿನಕ್ಕೆ ಈ ಫರ್ಹಾನ್ ವರಸೆ ಬದಲಿಸಿದ್ದಾಳಂತೆ.
ಇದ್ರೀಸ್ ಜೊತೆ ಫರ್ಹಾನ್ ಬರೀ 27 ದಿನ ಸಂಸಾರ ಮಾಡಿದ್ದಳು. ಅಲ್ಲಿಂದ ವರಸೆ ಬದಲಿಸಿದ್ದ ಫರ್ಹಾನ್ ಸೀದಾ ಹೋಗಿ ತವರು ಮನೆ ಸೇರಿಬಿಟ್ಟಿದ್ಳಂತೆ. ಅದಕ್ಕೆ ಕಾರಣವಾಗಿದ್ದ ಫರ್ಹಾನ್ ಫೋನ್ ಟಾಕಿಂಗ್. ದಿನಂಪ್ರತಿ ಫರ್ಹಾನ್ ಫೋನ್ನಲ್ಲಿ ಬ್ಯುಸಿಯಾಗಿರೋದನ್ನು ನೋಡಿ ಇದ್ರೀಸ್ ಯಾರು ಏನು ಅಂತ ವಿಚಾರಿಸಿದಾಗ ಶಾಕಿಂಗ್ ವಿಚಾರ ಗೊತ್ತಾಗಿದೆ. ಫೋನ್ನಲ್ಲಿ ಮಾತಾಡ್ತಿದ್ದ ವ್ಯಕ್ತಿಯನ್ನೇ ಕರೆದು ವಿಚಾರಿಸಿದಾಗ ಆ ವ್ಯಕ್ತಿ ಇವಳು ನನ್ನ ಹೆಂಡತಿ ಅಂತ ಹೇಳಿದ್ದಾನೆ ಆಗಲೇ ಫರ್ಹಾನಳ ಅಸಲಿ ಮುಖ ಇದ್ರಿಸ್ಗೆ ದರ್ಶನವಾಗಿದೆ.
ಶಾಕಿಂಗ್ ಸತ್ಯ ಏನಂದ್ರೆ ಫರ್ಹಾನ್ಗೆ ಅದಾಗಲೇ ಮದುವೆಯಾಗಿತ್ತಂತೆ. ಆ ಮದುವೆಯನ್ನು ಮುಚ್ಚಿಟ್ಟು ಫರ್ಹಾನ್ ಇದ್ರಿಸ್ ಜೊತೆಯೂ ಮದ್ವೆಯಾಗಿದ್ದಾಳು. ಇದೇ ವಿಚಾರಕ್ಕೆ ಗಲಾಟೆ ನಡೆದು ಫರ್ಹಾನ ಸೀದಾ ಹೋಗಿ ತವರು ಮನೆ ಸೇರಿದ್ದವಳು ವಾಪಸ್ ಬಂದೇ ಇಲ್ಲ. ಇಷ್ಟೇ ಆಗಿದ್ರೆ ಓಕೆ. ಫರ್ಹಾನ ಮನೆಯಲ್ಲಿದ್ದ ಚಿನ್ನ ಹಣ ಎಲ್ಲವನ್ನೂ ದೋಚ್ಕೊಂಡು ಹೋಗಿದ್ದಾಳೆ ಅಂತ ಪತಿ ಇದ್ರೀಸ್ ಫರ್ಹಾನ ಮೇಳೆ ಸಾಲು ಸಾಲು ಆರೋಪ ಮಾಡ್ತಿದ್ದಾರೆ.
ನೊಂದ ಪತಿ ಇದ್ರಿಸ್ ಹೇಳೋ ಪ್ರಕಾರ ಫರ್ಹಾನಾ ಮದುವೆಯಾಗೋದನ್ನೇ ಬ್ಯುಸಿನೆಸ್ ಮಾಡ್ಕೊಂಡಿದ್ಳಂತೆ. ಮದ್ವೆಯಾಗಿ ಮಕ್ಕಳಿದ್ದ ಪುರುಷರನ್ನೆ ಟಾರ್ಗೆಟ್ ಮಾಡಿ ಅವರನ್ನ ಮದುವೆಯಾಗಿ ಬಳಿಕ ಎಸ್ಕೇಪ್ ಆಗೋದೆ ಇವಳು ಚಾಳಿ ಮಾಡ್ಕೊಂಡಿದ್ದಾಳೆ ಅಂತ ಆರೋಪ ಮಾಡ್ತಿದ್ದಾರೆ.
ಫರ್ಹಾನಾ ತಾಯಿ ಕೂಡ ಮಗಳ ಕೆಲಸಕ್ಕೆ ಸಾಥ್ ನೀಡಿದ್ದಾಳಂತೆ. ಇಬ್ಬರು ಸೇರಿಯೇ ಈ ಕೆಲಸ ಮಾಡಿದ್ದಾರೆ. ಈಗಾಗಲೇ ಮದುವೆಯಾಗಿದ್ರೂ ಎಲ್ಲವನ್ನು ಮಚ್ಚಿಟ್ಟು ನನಗೆ ಮೋಸ ಮಾಡಿದ್ದಾರೆ ಅಂತ ಇದ್ರೀಸ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ಇದ್ರಿಸ್ ಪೊಲೀಸರಿಗೆ ದೂರು ಕೊಟ್ರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಇದ್ರಿಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗಾಗಲೇ ಹಲವರನ್ನು ಹನಿಟ್ರ್ಯಾಪ್ ಮಾಡಿರುವ ಫಾರ್ಹಾನ ಖಾನಂ, ಸದ್ಯವೂ ಮೂವರು-ನಾಲ್ವರು ಪುರುಷರೊಂದಿಗೆ ಲವ್ವಿಡವ್ವಿ ನಡೆಸುತ್ತಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.ಸದ್ಯ ಇದ್ರಿಸ್ ಜಮೀನಿನ ಮೇಲೂ ಫರ್ಹಾನ್ ಕಣ್ಣು ಹಾಕಿದ್ದು, ನ್ಯಾಯ ಕೊಡಿಸಿ ಅಂತ ಐಜಿಗೂ ಕೂಡ ದೂರು ಸಲ್ಲಿಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.