ಕರಾವಳಿ
ಕೋಟೇಶ್ವರ: ಬೀಜಾಡಿ ಸಮುದ್ರದಲ್ಲಿ ಮರಣಬಲೆ ಬಿಡಲು ಹೋಗಿ ಅಲೆಗೆ ಸಿಲುಕಿ ಮೀನುಗಾರ ನೀರುಪಾಲು

Views: 179
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸಮೀಪದ ಕೋಟೇಶ್ವರ ಹಳೆಅಳಿವೆ ಬಳಿ ಯುವಕನೊರ್ವ ಸಮುದ್ರದಲ್ಲಿ ಮರಣಬಲೆ ಬಿಡಲು ಹೋಗಿ ಸಮುದ್ರದ ಅಲೆಗೆ ಸಿಲುಕಿ ಮೀನುಗಾರ ಮೃತಪಟ್ಟ ಘಟನೆ ಫೆ. 25 ರಂದು ಮಂಗಳವಾರ ಸಂಭವಿಸಿದೆ.
ಮೃತಪಟ್ಟ ಯುವಕ ಬೀಜಾಡಿ ಕುಮಾರ್ ಅವರ ಪುತ್ರ ಮೇಘರಾಜ್ (24) ಎಂದು ತಿಳಿದುಬಂದಿದೆ.
ಮೇಘರಾಜ್ ಅವರು ಬೆಳಿಗ್ಗೆ ಹಳಿಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋದ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಮೀನುಗಾರ ನೀರುಪಾಲಗಿದ್ದು ಸಂಜೆ ವೇಳೆ ಬೀಜಾಡಿ ಸಮೀಪ ಕಡಲ ಎಡಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.