ಕನ್ನಡ ಕರಾವಳಿ ಸುದ್ದಿ: ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಕೊಲ್ಲೂರು ಇಲ್ಲಿ ನೆಡೆದ ಪೋಷಕರ ಸಭೆಯಲ್ಲಿ ಚಂಡೀಗಢದಲ್ಲಿ ನೆಡೆದ ರಾಷ್ಟ್ರ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ದ್ವಿತೀಯ ವಾಣಿಜ್ಯ ವಿಭಾಗದ ನಿತ್ಯಾನಂದ, ನಾಗಮಣಿ ಏಚ್ ಎನ್, ಹಾಗೂ ಸಿಂಚನ ಅವರನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ ಅವರು ಸನ್ಮಾನಿಸಿ, ದೇವಸ್ಥಾನದಿಂದ ಹತ್ತು ಸಾವಿರ ರೂಪಾಯಿ ನಗದು ನೀಡಿ ಅಭಿನಂದಿಸಿದರು.ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ .ಬಿ, ಮನಶಾಸ್ತ್ರಜ್ಞ ಡಾ.ನವೀನ್ ಎಳ್ಳಂಗಳ, ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಗಳು ಉಪಸ್ಥಿತರಿದ್ದರು.